Sunday, June 27, 2010

ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಜಾತಕ ಇಲ್ಲದೆ ಇರುವುದು ಅದುವೆ - ಪ್ರೀತಿ

ಆರು ತಿಂಗಳ ಹಿಂದೆ...........

ಇತ್ತಿಚಿನ ದಿನಗಳಲ್ಲಿ ಅಮ್ಮನಿಗೆ ಪೋನ್ ಮಾಡಿದಾಗ ಮಾತಾಡ್ತಾ ಮಾತಾಡ್ತ ಏನಮ್ಮ ತಿಂಡಿ ಅಂದರೆ ನಿಮ್ಮ ಮಾವ ಊರಿಂದ ಹಸಿ ಅವರೆ ತಂದಿದ್ದ ಅವರೆಕಾಳು ಉಪ್ಪಿಟ್ಟು ಮಾಡಿದಿನೋ ಅಂತಿದ್ದಳು.ಯಾಕೆಂದರೆ ಆಗ ಅವರೆಕಾಳು season ಅಲ್ವ ಅದಕ್ಕೆ.ನೋಡಮ್ಮ ನಾನು ಬರೋ ವಾರ ಮೂರು ದಿವಸ ರಜೇ ಇದೆ ಊರಿಗೆ ಬರ್ತಿನಿ ಅವರೆಕಾಳು ಉಪ್ಪಿಟ್ಟು ಮಾಡಿಕೋಡಬೇಕು ಅಂತ ಹೇಳಿದೆ. ಆ ಮಾತಿನಂತೆ ಅಮ್ಮ ಮೊನ್ನೆ ಕ್ರೀಸ್ ಮಸ್ ರಜೆಗೆ ಮನೆಗೆ ಹೋದಾಗ ಅವರೆಕಾಳು ಉಪ್ಪಿಟ್ಟು ಮಾಡಿಕೊಟ್ಟಳು. ಅಮ್ಮ ಮಾಡಿದ ಬಿಸಿಬಿಸಿ ಅವರೆಕಾಳು ಉಪ್ಪಿಟ್ಟುನ ಚಟ್ನಿ ಪುಡಿಗಳನ್ನ ಹಾಕಿಕೊಂಡು ಒಳ್ಳೆ ಭಕಾಸುರನ ಹಾಗೆ ತಿಂದು ಕೈ ತೊಳೆದುಕೊಂಡು ಕಾಫಿ ಪೇಯವನ್ನು ಹಿರುತ್ತ ಕುಳಿತೆ.ಈ ಬಾರಿ ಊರಿನಿಂದ ನನ್ನ ದೊಡ್ಡಪ್ಪನು ಮನೆಗೆ ಬಂದಿದ್ದರು ಹಾಗೆ ಕಾಫಿ ಕುಡಿತ ಕುಡಿತ ದೊಡ್ಡಪ್ಪ ಮತ್ತು ಅಮ್ಮನ ಜೊತೆ ಮಾತಡ್ತ ಕುಳಿತೆ.

ಅಮ್ಮ ಮಾತಿನ ಮದ್ಯೆ ನನ್ನ ದೊಡ್ಡಪ್ಪನ ಹತ್ತಿರ ನನ್ನ ಮದುವೆ ವಿಷಯ ಮಾತಡಿದಳು. ಮಾವ ಈ ವರ್ಷ ಇವನ ಮದುವೆ ಮಾಡಬೇಕು ಅಂತ ಅಂದಳು. ಊನವ್ವ ಈ ವರ್ಷ ಬಿತ್ತ ಸುಗ್ಗಿ ಮುಗಿಲಿ ಹೆಣ್ಣು ನೋಡಿ ವಾಲಾಗ ಊದಿಸಿಬಿಡೋಣ ಅಂದ ನನ್ನ ದೊಡ್ಡಪ್ಪ.ಸುಮ್ನೆ ಕುಂತಿಯಲ್ಲೊ ಏನಾದರು ಮಾತಾಡು ಅಂದ್ರು ನಿನ್ನ ವಯಸ್ನಾಗೆ ನನಗೆ ಇಬ್ಬರು ಮಕ್ಕಳು ಇದ್ರು ಕಣ್ಲ ಅಂದ್ರು. ಹೌದು ದೊಡ್ಡಪ್ಪ ಮದುವೆ ಆದ್ರೆ ಅಲ್ವ ಮುಂದೆ ಮಕ್ಕಳು ಎಲ್ಲಾ ಹಾಗೆ ಹೇಗೆ ಹಾಗ್ತವೆ ಹೇಳ್ರಿ ಅಂತ ನನ್ನ ದೊಡ್ಡಪ್ಪನ ಹತ್ತಿರ ತಮಾಷೆ ಮಾಡಿದೆ. ದೊಡ್ಡವರ ಹತ್ತಿರ ಹೇಗೆ ಮಾತಡಬೇಕು ಅಂತನು ಗೊತ್ತಿಲ್ಲ ಅಂತ ಅಮ್ಮ ಬೈದಳು ಸುಮ್ನೆ ಕುಳಿತೆ.

ಕನ್ಯಾ ನೋಡ್ತಿವಿ ಮದುವೆ ಆಗಿ ಬೀಡು ಅಂದರು. ದೊಡ್ಡವರು ಹೇಳಿದ ತಕ್ಷಣ ಒಪ್ಪಿಕೊಂಡರೆ ಎಲ್ಲಿ ಹುಡುಗ ಬಾರಿ fast ಇದಾನೋ ಅಂತ ತಿಳಿಕೊಂಡುಬಿಡ್ತಾರೋ ಅಂತ ಸುಮ್ನೆ ಮಾತಿಗೆ ಇರಲಿ ಅಂತ ಇಷ್ಟು ಬೇಗಾನ ಯಾಕಮ್ಮ ಇನ್ನೊಂದೆರಡು ವರ್ಷ ಬಿಟ್ಟು ಹಾಗ್ತಿನಿ ಅಂತ ಅಂದೆ. ಹಾಗೆ ಭಯನು ಆಯ್ತು ಮದುವೆ ಆಗೋಕೆ ಅಲ್ಲಾ ಎಲ್ಲಿ ನಾನು ಹೇಳಿರೊ ಮಾತನ್ನ ಸೀರಿಯಸ್ ಆಗಿ ತಗೋಂಡು ಇನ್ನು ಎರಡು ವರ್ಷ ಮದುವೆ ವಿಷಯ ತಗೆಯದೆ ಇರ್ತಾರೊ ಅಂತ.

ಅದಕ್ಕೆ ಅಮ್ಮ ನೀನೆನು ಚಿಕ್ಕ ಹುಡುಗ ಏನೋ ನಿನ್ನ Friendsಗಳು ಎಲ್ಲಾ ಮದುವೆ ಆಗ್ತಾ ಇಲ್ವ ನೀನು ಆಗೋ ಅಂದ್ರು.ಹಾಗದ್ರೆ ಅವರು ಎಲ್ಲಾ ಲವ್ ಮಾಡಿ ಮದುವೆ ಹಾಗ್ತ ಇದ್ದಾರೆ ನಾನು ಯಾವುದಾದಾರು ಹುಡುಗಿನ ಲವ್ ಮಾಡಿ ಕರೆದುಕೊಂಡು ಬಂದು ನಿನ್ನ ಮುಂದೆ ನಿಲ್ಲಿಸಿ ಅಮ್ಮ ಇವಳೆ ನಿನ್ನ ಸೊಸೆ ನಮಗೆ ಮದುವೆ ಮಾಡು ಅಂದ್ರೆ ಮಾಡಿಸ್ತೀಯ ಅಂದೆ. ನೋಡು ನಾವು ತಮಾಷೆ ಮಾಡ್ತ ಇಲ್ಲ ಅಂದು ಅಮ್ಮ ಸ್ವಲ್ಪ ಸೀರಿಯಸ್ ಆದಳು. ನನಗೊ ಮನೆ ಕೆಲಸ ಮಾಡಿ ಮಾಡಿ ಸಾಕಾಗಿ ಹೋಗೈತಿ ಮನೆಗೆ ಸೊಸೆ ಮಂದರೆ ಅವಳು ಸ್ವಲ್ಪ ಮನೆ ಜವಾಬ್ದಾರಿ ತಗೋಳ್ತಾಳೆ ಅಂದಳು.

ಮನೆ ಕೆಲಸ ಮಾಡೋಕೆ ಸೊಸೆನೆ ಬೇಕಾ ಮನೆ ಕೆಲಸದವಳನ್ನ ಇಟ್ಟುಕೊಂಡರೆ ಆಯ್ತು ಬಿಡಮ್ಮ ಅಂದೆ. ಬಟ್ಟೆ wash ಮಾಡೋಕೆ ಅಂತ washing machine ಇದೆ, ಇನ್ನು ...... ಕೆಲಸಕ್ಕೆ ...... ಇದವೆ ಅದಕ್ಕೆ ಮದುವೆನೆ ಆಗಬೇಕ ಅಂತ ತಮಾಷೆ ಮಾಡಿದೆ.

ಮತ್ತು ತಮಾಷೆ ನೋಡು ನಿಂದು ಎಂತ ಹುಡುಗಿ ಬೇಕು ಹೇಳು? ಹುಡುಕ್ತಿವಿ ಅಂದ್ರು. ನಾನು ಓಂದು ಕ್ಷಣ ಏನನ್ನು ಮಾತನಾಡದೆ ಸುಮ್ನೆ ಕೂತಿದ್ದೆ.

ನನ್ನ ಅಮ್ಮನಿಗೆ ಮನಸ್ಸಿನಲ್ಲೆ ಸಂಶಯ ಇತ್ತು ಅನಿಸುತ್ತೆ ಕೊನೆಗೂ ತಡಿಲಾರದೆ ಕೇಳಿಬಿಟ್ಟಳು ನೀನು ಯಾರನ್ನಾದರು ಹುಡುಗಿನ ಇಷ್ಟ ಪಟ್ಟಿದಿಯೇನೋ ಅಂತ ಕೇಳಿದಳು.
ನಿನಗೆ ಯಾಕಮ್ಮ ಇಂತ ಡೌಟ್ ಬಂತು ಅಮ್ಮ ನಾನು ನಿನ್ನ ಮಗ ನನ್ನ ಮೇಲೆ ನಿನಗೆ ನಂಬಿಕೆ ಇಲ್ವಾ ಅಂದೆ. ಅದಕ್ಕೆ ಅಮ್ಮ ನಿನ್ನ ಮೇಲೆ ನನಗೆ ನಂಬಿಕೆ ಇದೆ ಕಣೋ ಆದ್ರೆ ಈ ನಿನ್ನ ವಯಸ್ಸಿನ ಮೇಲೆ ನನಗೆ ನಂಬಿಕೆ ಇಲ್ಲಾ ಅದಕ್ಕೆ ಅಂದ್ರು.ಕೋನೆಗೆ ಅಮ್ಮ ನೋಡು ನೀನು ಬೇಕಾದರೆ ಪ್ರೀತಿ ಮಾಡಿಬಿಟ್ಟೆ ಮದುವೆ ಆಗಪ್ಪಾ ನಾನು ಬೇಡ ಅನ್ನೊಲ್ಲ ಆದರೆ ನೀನು ಪ್ರೀತಿಸೊ ಹುಡುಗಿ ಇದಳಲ್ಲ ಅವಳು ಮಾತ್ರ ನಮ್ಮ ಜಾತಿಯವಳೆ ಆಗಿರಬೇಕು ಅಂದ್ರು. ನನಗೆ ಆ ಮಾತು ಕೇಳಿ ನುಂಗಲಾರದೆನೆ ಬಿಸಿ ತುಪ್ಪನ ಬಾಯಿಯಲ್ಲಿ ಇಟ್ಟು ಕೊಂಡ ಹಾಗೆ ಹಾಯ್ತು. ಒಂದೆ ಸಲ green signal ಕೊಟ್ಟು red signal ಹಾಕಿದ ಹಾಗೆ ಆಯ್ತು.

ಆಮೇಲೆ ನನ್ನ Youth dialogues start ಆಯ್ತು. ನೋಡಮ್ಮ LOVE IS BLIND ಪ್ರೀತಿ ಕುರುಡು ಕಣಮ್ಮ. ಈ ಪ್ರೀತಿ ಆನ್ನೊದು ಒಂದು ಆಕರ್ಷಣೆ. ಅದು ಹುಟ್ಟಬೇಕಾದ್ರೆ ಯಾರಿಗೂ ಹೇಳಿ ಕೇಳಿ ಹುಟ್ಟಲ್ಲ ಹುಟ್ಟಕ್ಕೆ ಯಾರ ಅಪ್ಪಣೆನು ಬೇಕಿಲ್ಲ ಅಮ್ಮ. ಈ ಭೂಮಿ ಮೇಲೆ ಹುಟ್ಟಿದ ಮೇಲೂ ಅದು ಯಾವ ಜಾತಿ ಅಂತ ಹೇಳೊಕೆ ಆಗದೆ ಇರುವಂತಹದು ಅಂದರೆ ಅದು ಪ್ರೀತಿ. ಅದು ಯಾವ ಜಾತಿ ಮತ ಅಂತ ನೋಡಿ ಹುಟ್ಟಲ್ಲ."ನಮ್ಮ ಮೇಲೆ ಕರುಣೆನೆ ಇಲ್ಲದೆ ಇರೋ ಸಾವು ಕೋಡ ಕೆಲವೂಂದು ಸಲ ನಮಗೆ ಸುಳಿವು ನೀಡಿ ನಮ್ಮ ಹತ್ತಿರ ಸುಳಿಯುತ್ತೆ ಆದರೆ ಈ ಪ್ರೀತಿ ಇದೆಯಲ್ಲಾ ಅದು ಎದೆಯ ಬಾಗಿಲನ್ನು ತಟ್ಟದೆ ತಿಳಿದು ತಿಳಿಯದನೆ ನಮ್ಮ ಮನಸ್ಸಿನಲ್ಲಿ ಬಂದು ಸೇರಿಕೊಂಡುಬಿಡುತ್ತೆ."

ಹೋಗ್ಲಿ ಬಿಡಮ್ಮ ನಾನು ಆ ಸಾಹಸಕ್ಕೆ ಕೈ ಹಾಕೊಕ್ಕೆ ಹೋಗಿಲ್ಲಾ. ಆ ವಿಷಯದಲ್ಲಿ ನಿನ್ನ ಮಗನಿಗೆ ಧೈರ್ಯನು ಕಮ್ಮಿನೆ ಅಂತ ಅಂದು ಮಾತು ಮುಗಿಸಿ ನನ್ನ ದೊಡ್ಡಪ್ಪನ ಬಸ್ ಸ್ಟಾಂಡ್ಗೆ ಬೀಡೊಕೆ ಅಂತ ಬೈಕ್ ಹೇರಿ ಹೊರಟೆ.

7 comments:

Unknown said...

ಈ ಪ್ರೀತಿ ಇದೆಯಲ್ಲಾ ಅದು ಎದೆಯ ಬಾಗಿಲನ್ನು ತಟ್ಟದೆ ತಿಳಿದು ತಿಳಿಯದನೆ ನಮ್ಮ ಮನಸ್ಸಿನಲ್ಲಿ ಬಂದು ಸೇರಿಕೊಂಡುಬಿಡುತ್ತೆ : ನಿಗವನ್ಸುತ್ತೆ.

ಲೇಖನ ತುಂಬಾ ಸೊಗಸಾಗಿದೆ.

Sudhir said...

Gud 1 Basavaraj :)

Anonymous said...

ಬರವಣಿಗೆ ಚೆನ್ನಾಗಿ ಮೂಡಿದೆ.
ಪ್ರೀತಿನೆ ಹಾಗಲ್ವ ಹೇಳ್ದೆ ಕೇಳ್ದೆ ಆಗುತ್ತೆ. ಅದ್ರಿಂದ ತಪ್ಪಿಸ್ಕೊಳ್ಳೊದು ಕಷ್ಟ.. ಅದಕ್ಕಾವ precautionಊ ಇಲ್ಲ..;) ಹಾಗೊಂದ್ವೇಳೆ ಪ್ರೀತಿಸಿ ಮದುವೆ ಆಗಲು ಸಾಧ್ಯವಿಲ್ಲಾಂತಾದರೆ ಪ್ರೀತಿನ ಮನಸ್ಸಲ್ಲೇ ಬಚ್ಚಿಡ್ ಬೇಕಷ್ಟೆ.
ಈಗ ವಿಷಯಕ್ಕೆ ಬರ್ತಿನಿ.. ಬರಿ ಪ್ರೀತಿಯ ವಿಷಯದ ಮೇಲೇನೆ ಗಿರಕಿ ಹೊಡಿತಿರೊ ನಿಮ್ಮ ಮನಸ್ಸಿನ ಕಥೆ ವಯಸ್ಸಿನ ದೊಷ ಅನ್ಲಾ ಅಥವ there is something something ಅನ್ಲಾ.. ;)

-ಶ್ರುತಿ

Basavaraj said...

@Sudheer, @siddalingamurthy
ಧನ್ಯವಾದಗಳು.

@Shravana
ವಯಸ್ಸಿನ ದೊಷನು ಅಲ್ಲ something something ಅಲ್ಲ its just an discussion with my mom.

ಧನ್ಯವಾದಗಳು.

Anonymous said...

Nice article le.

-Reddi

Anonymous said...

ಪ್ರೀತಿ ಹೇಳ್ದೆ ಕೇಳ್ದೆ ಆಗೊಲ್ಲ ನಾವು ಇಷ್ಟಪಟ್ಟು ಪ್ರೀತಿಸಿದರೆ ಮಾತ್ರ ಆಗೊದು. ನಾವು ಇಷ್ಟಪಟ್ಟದ್ದೆಲ್ಲ ಪ್ರೀತಿಸಿದ್ದೆನೆ ಅಂತ ಹೇಳಲಿಕ್ಕಾಗೊಲ್ಲ ಅಲ್ವಾ ! ಅಮ್ಮನ ಹತ್ತಿರ ಹೇಳು ನೀವಾಗಿ ಹುಡುಗಿ ಬೇಗನೆ ಹುಡುಕದಿದ್ದರೆ ನಾನೆ ಹುಡುಕುತ್ತೆನೆ ಅಂತ ಆಗ ಬೇಗ ಅವರೆ ಹುಡುಕುತ್ತಾರೆ.

ಪ್ರದೀಪ

Anonymous said...

Enri avarekalu uppittu jothege preethi alwanu thinnisibittiddira.

Youth dialogues super.

lekhana thumba sogasigidhe.

Regards,
Yogi