Sunday, February 23, 2014

ಉಗ್ರಂ

ಚಿತ್ರದ ಹೇಸರು ಕೇಳಿದರೆ ಗೊತ್ತಾಗುತ್ತೆ ಇದು ಒಂದು ಪಕ್ಕಾ action ಸಿನಿಮಾ ಅಂತ. ಇಲ್ಲಿ ಉಗ್ರ ರೂಪನ ತಾಳೋರು ಯಾರು ಅಂದ್ರೆ ಅಗಸ್ತ್ಯ(Sri Muruli). ವಿಷ್ಣುವಿನ ತಾಳ್ಮೆನು ಇರಲಿ & ನರಸಿಂಹನ ಉಗ್ರ ಕೋಪನು ಇರಲಿ ಅಂತ ಅಗಸ್ತ್ಯನಿಗೆ ಅವರ ತಂದೆ ಹೇಳಿದ ಕೊನೆಯಮಾತು. ತಾಯಿನಂತು ನೋಡಿಲ್ಲ atleast ತಾಯ್ನಡಲ್ಲಿ ಇರೊ ತನ್ನ ತಾಯಿಯ ಸಮಾಧಿಯನ್ನಾದರು ನೋಡಬೇಕು ಅಂತ ವಿದೇಶದಿಂದ ತಾಯ್ನಾಡಿಗೆ ಬಂದ ನಾಯಕಿಗೆ(Hari Priya) ಅಷ್ಟು ಸುಲಭದಲ್ಲಿ ಈ ಭಾಗ್ಯ ಸಿಗೋಲ್ಲ.ಯಾಕೆ ಅಂದ್ರೆ ಅವಳನ್ನ ಸಾಯಿಸಬೇಕು ಅಂತ ಅವಳ ಬರುವಿಕೆಯನ್ನೆ ಕಾಯ್ತ ಇರುತ್ತಾನೆ ಶಿರಾದ ರಾಜಕೀಯ ಮುಖಂಡ ಅವಿನಾಶ್.ಸಂಕಷ್ಟದಲ್ಲಿ ಇರುವ ನಾಯಕಿನ ಕಾಪಡುವುದರ ಮೂಲಕನೇ ನಾಯಕ ಅಗಸ್ತ್ಯನ ಎಂಟ್ರಿ ಹಾಗುತ್ತೆ. ಇಂಡಿಯಾದ ಭಾವುಟದಲ್ಲಿರೊ ಬಣ್ಣಗಳನ್ನು ನೋಡಿ ಇಂಡಿಯಾನು ಅಷ್ಟೇ ಕಲರ ಫುಲ್ ಆಗಿರುತ್ತೆ ಅಂದುಕೊಂಡು ತನ್ನ ಅಪ್ಪ ಜೈ ಜಗದೀಶ್ ಗೆ ಸ್ಪೇನ್ ಗೇ ಹೋಗ್ತಿನಿ ಅಂತ ಸುಳ್ಳು ಹೇಳಿ ಇಂಡಿಯಾಗೆ ಬಂದ ನಾಯಕಿಗೆ ಇಲ್ಲಿ ಯಾವುದು ಸರಿ ಇಲ್ಲ ಅಂತ ಬೇಗನೆ ಅರ್ಥ ಮಾಡಿಕೊಂಡು ನಾಯಕ ಅಗಸ್ತ್ಯನ ಮುಂದೆ I hate India ಅಂತಾಳೆ.ನಾಯಕಿ ಬೇರೆ ಎಲ್ಲೆ ಇದ್ರು ಅವಳು ಸುರಕ್ಷಿತವಾಗಿರಲ್ಲ ಅಂತ ಗೊತ್ತಾದಗ ಅವಳನ್ನ ಅಮ್ಮನ ಹತ್ತಿರ ಕೆಲಸ ಕೇಳಿಕೊಂಡು ಬಂದಿದ್ದಾಳೆ ಅಂತ ಸುಳ್ಳು ಹೇಳಿ ತನ್ನ ಮನೆಯಲ್ಲೆ ಇರು ಅಂತ ಹೇಳಿ ಅವಳ ಆಸೇನ ನೆರವೇರಿಸುತ್ತಾನೆ. I hate India ಅಂದ ನಾಯಕಿ ಕ್ರಮೇಣ ನನಗೆ ಈ ಜಾಗ ಬಿಟ್ಟು ಹೋಗೋಕೆ ಇಷ್ಟ ಆಗ್ತಿಲ್ಲ ಅಂದು I Love India ಅಂತ ಹೇಳ್ತಾಳೆ. ಅಗಸ್ತ್ಯ ತನ್ನ ಉಗ್ರ ರೂಪವನ್ನು ಬಿಟ್ಟು ಕೋಲಾರದಲ್ಲಿ ಸಣ್ಣ ಗ್ಯಾರೇಜ್ ಅಂಗಡಿನ ಇಟ್ಟುಕೊಂಡು ತನ್ನ ತಾಯಿ ಜೋತೆ ಜೀವನ ನಡೆಸುತ್ತ ಇರುತ್ತಾನೆ. ಅಗಸ್ತ್ಯನ ನಿಜವಾದ ಕಥೆ ಇರೋದೆ ಉತ್ತರ ಕರ್ನಾಟಕದ ಮುಗೋರ್ ನಲ್ಲಿ. ಇಂಟರ್ವಲ್ ನಂತರ ಸ್ಟಾರ್ಟ್ ಹಾಗೋ ಅಗಸ್ತ್ಯನ flashback ಕಥೆ ತುಂಬ ವೇಗವಾಗಿ ಸಾಗುತ್ತ ಹೋಗುತ್ತದೆ. ಸ್ನೇಹಿತ ಬಾಲ(ತಿಲಕ್) ಹತ್ತು ಜನ ಮೀಸೆ ಇರುವ ಹುಡುಗರನ್ನ ಇಟ್ಟುಕೊಂಡು ಗುಂಪು ಕಟ್ಟಿಕೊಳ್ಳದಕ್ಕಿಂತ ಮೀಟರ್ ಇರುವ ಒಬ್ಬನು ಇದ್ರೆ ಸಾಕು ಅಂತ ಅಗಸ್ತ್ಯನ ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಹೆಣ್ಣಿನ ಕೋಗಿಗೆ ಮತ್ತು ಮಗುವಿನ ಅಳುಗೆ ಕರಗದೆ ಇರುವ ಮನಸಿಲ್ಲ ಅನ್ನುವ ಹಾಗೆ ಅಪ್ಪನ ಕೊಂದವನನ್ನು ತೋರಿಸಿದರು ಉಗ್ರರೋಪವನ್ನು ತಾಳದವ ಒಂದು ಹೆಣ್ಣಿನ ಕೋಗು ಅಗಸ್ತ್ಯನ ನ್ನು ನರಸಿಂಹನ ಉಗ್ರವಾತರವನ್ನು ತಾಳುವ ಹಾಗೆ ಮಾಡುತ್ತದೆ.ಇಲ್ಲಿ ದಂಡ ಓಡಿದ್ರೆ ಮರಳಲ್ಲಿ ಮನೆನು ಕಟ್ಟೋಕೇ ಹಾಗೋಲ್ಲ ದಂಡಿಸಿದ್ರೆ ಸಾಮ್ರಜ್ಯನೆ ಕಟ್ಟಬಹುದು ಅಂತ ಅಂದು ಈಡಿ ಮುಗೋರ್ ತನ್ನ ವಶಕ್ಕೆ ತಗೋತಾನೆ. ಇಲ್ಲಿ ಜೈ ಜಗದೀಶ್ಗೆ ಮತ್ತು ಅವಿನಾಶ್ಗೆ ದ್ವೇಷ ಯಾಕೀರುತ್ತೆ? ಅಗಸ್ತ್ಯನ actual flashback ಕಥೆ ಏನು? I Love India ಅಂದ ನಾಯಕಿ I Love You ಅಗಸ್ತ್ಯ ಅಂತ ಹೇಳ್ತಾಳ? ಇದೆಲ್ಲ ಗೋತ್ತಾಗಬೇಕು ಅಂದ್ರೆ ಒಮ್ಮೆ ಮುರಳಿಯ ಉಗ್ರಾವಾತರದ "ಉಗ್ರಂ" ನ ನೋಡಿ. ಸಿನಿಮಾದಲ್ಲಿ ರವಿ ಅವನ ಹಿನ್ನಲೆ ಸಂಗೀತ, ರವಿವರ್ಮ ಅವರ ಸಹಾಸ ಧ್ರುಶ್ಯಗಳು,ರವಿವರ್ಮನ್ ರವರ ಛಾಯಗ್ರಹಣ ಮತ್ತು ಪ್ರಶಾಂತ್ ನೀಲ್ ನಿರ್ದೇಶನ ಉತ್ತಮವಾಗಿದೆ. ಶ್ರೀ ಮುರಳಿ ಅವರ ನೋಟದಲ್ಲಿ ಇದ್ದ ಉಗ್ರತೆ ಅವರ ಕಂಠಸಿರಿಯಲ್ಲಿ ಇರಲಿಲ್ಲ ಅನ್ನೋದು ಬಿಟ್ಟರೆ ಶ್ರೀ ಮುರಳಿ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ಉತ್ತಮವಾಗಿ ಅಭಿನಯಿಸಿದ್ದಾರೆ.ಶ್ರೀ ಮುರಳಿಗೆ ಇದು ಒಂದು comeback ಸಿನಿಮಾ ಅಂತಾನೆ ಹೇಳಬಹುದು. ಒಟ್ಟಿನಲ್ಲಿ "ಉಗ್ರಂ" ಒಂದು ಉತ್ತಮ ಸಿನಿಮಾ ಅಂದರು ತಪ್ಪೆನಿಲ್ಲ.

Sunday, February 24, 2013

ಮೈನಾ = COLOURFULLLLLL...!

ಮೈನಾ = COLOURFULLLLLL...! ನಾಗಶೇಖರ ಅವರು ಪ್ರೇಮಿಗಳು ಸತ್ತರು ಅವರ ಪ್ರೀತಿಗೆ ಸಾವಿಲ್ಲ ಅಂತ ತೋರಿಸುವ ತಮ್ಮ ಚಿತ್ರ ಪರಂಪರೆಯನ್ನ ಮೈನಾ ಚಿತ್ರದ ಮೂಲಕ ಮುಂದುವರೆಸಿಕೊಂಡು ಹೋಗಿದ್ದಾರೆ. ಸತ್ಯ ಹೆಗ್ದೆ ಅವರ camera ಕೈಛಳಕದಿಂದ ಮೈನಾ ಸಿನಿಮಾ ಮೈನಾ ಹಕ್ಕಿಯಷ್ಟೆ COLOURFULLLLLL..! ಆಗಿ ತುಂಬಾ ಅಧ್ಬುತವಾಗಿ ಮೂಡಿಬಂದಿದೆ. ಜೆಸ್ಸಿ ಗಿಫ್ಟ್ ಅವರ ಸಂಗೀತ ಮತ್ತು ಕವಿರಾಜ್ ಅವರ "ತೆಗೆದುಕೊಂಡು ಕೋಂಚವೆ ನಿನ್ನ ಕಣ್ಣ್ಗಾಡಿಗೆ ದೃಷ್ಟಿ ಬೊಟ್ಟು ಇಡಲೆ ನಾ ನಿನ್ನ ಅಂಗಾಲಿಗೆ"(Sample lines) ಅನ್ನೊ ಸಾಹಿತ್ಯ ತುಂಬಾ ಸೋಗಸಾಗಿದೆ. ಕಲಾವಿದ/ದೆ ತನಗೆ ಎಂತ ಪಾತ್ರವನ್ನು ಕೊಟ್ಟರು ಅದಕ್ಕೆ ಜೀವ ತುಂಬ ಬೇಕು ಅದನ್ನು ಮಾಡುವಲ್ಲಿ ನೀತ್ಯ ಮೇನನ್ ಅವರು ಯಶಸ್ವಿ ನಟಿ ಆಗಿದ್ದಾರೆ. ಇನ್ನು ನಾಯಕ ಚೇತನ್, ಪೋಲಿಸ್ ಅಧಿಕಾರಿ ಪಾತ್ರವನ್ನು ಮಾಡಿರುವ ತೆಲುಗು ಚಿತ್ರರಂಗದ ಮೇರು ನಟ ಶರತ್ ಕುಮಾರ್ ಮತ್ತು ಸಿದ್ಲಿಂಗು ಆಂಡಳಮ್ಮ ಸುಮನ ರಂಗನಾಥ್ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಕಥೆಯಲ್ಲಿ ಅಂತ ಹೋಸತನವೇನು ಇಲ್ಲ ಆದರೆ ಮೈನಾ ಸಿನಿಮಾದ ಅದ್ಭುತ ದೃಶ್ಯ ವೈಭವ ನಿಮ್ಮನ್ನು ಬೇರೆ ಜಗತ್ತಿಗೆ ಎಳೆದೊಯ್ಯಲಿದೆ.ಚಿತ್ರದ ಹಾಡುಗಳು ಹಾಗೂ ಅದರ ಚಿತ್ರೀಕರಣ ನೋಡಲು ಥೇಟರ್ ಗೆ ಬಂದರೂ ಟಿಕೆಟ್ ದುಡ್ಡಿಗೆ ನಷ್ಟವಿಲ್ಲ. ನಾಗಶೇಖರ ಅವರು ಪ್ರೇಮಿಗಳಿಗೆ ಅವರ ಪ್ರೀತಿನ express ಮಾಡೋಕೆ ಅಂತ ಒಂದು ಹೊಸ ಕೋಡ್ ವರ್ಡ್ ನ ಸೃಷ್ಟಿ ಮಾಡಿದ್ದಾರೆ COLOURFULLLLLL ಅಂತ. ಕೋಡ್ ವರ್ಡ್ ಬಗ್ಗೆ ಮಾಹಿತಿ ಪೂರ್ಣವಾಗಿ ಬೇಕು ಅಂದರೆ theater ಹೋಗಿ ಸಿನಿಮಾ ನೋಡಿ.

Sunday, June 17, 2012

ಅದ್ಧೂರಿ

ಅದ್ಧೂರಿ - ಇತ್ತಿಚೀನ ದಿನಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳು ಅಷ್ಟೋಂದು ಯಶಸ್ಸು ಕಂಡಿರಲಿಲ್ಲ ಅದ್ಧೂರಿ ಚಿತ್ರ ಅದಕ್ಕೊಂದು ಬ್ರೇಕ್ ಕೊಟ್ಟಿದೆ ಅಂದರೆ ತಪ್ಪಗಾಲಾರದು.



ಅರ್ಜುನ ಅವರು ಅದ್ಧೂರಿ ಚಿತ್ರನ ಅದ್ಧೂರಿಯಾಗೆ ಮಾಡಿದ್ದರೆ. ಕಾಸು ಕೊಟ್ಟು ನೋಡೊಕೆ ಹೋಗುವವರಿಗೆ ಮೋಸ ಅಂತು ಹಾಗೋಲ್ಲ ಓಮ್ಮೆ ನೋಡುವಷ್ಟು ಅದ್ಧೂರಿಯಾಗಂತು ಇದೆ.ಕಥೆಯಲ್ಲಿ ಅಂತ extradinary ಅಂತ ಏನು ಇಲ್ಲ ಆದರೆ ಈಗಿನ generation ಗೆ ಸರಿದೂಗುವಂತ ಕಥೆನ ಮಾಡಿದ್ದಾರೆ ಅಂದರೆ ತಪ್ಪಾಗಲಾರದು.



ಈ ಚಿತ್ರದಿಂದ ಮತ್ತೊಂದು ಸರ್ಜಾ ಕುಡಿ ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ.



ಧ್ರುವ ಸರ್ಜಾ ಅವರು ಕುಣಿಯೋಕು ಸೈ Actionಗು ಸೈ ಅಂತ ತೋರಿಸಿ ನಟನೆಯಲ್ಲಿ ಸೈ ಅನಿಸಿಕೊಂಡಿದ್ದಾರೆ.ರಾಧಿಕಾ ಪಂಡಿತ್ ಓಳ್ಳೆ ನಟಿ ಅಂತ prove ಮಾಡಿದ್ದಾರೆ.



ನಿರ್ದೆಶಕ ಅರ್ಜುನ ಅವರು ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಸರಿಯಾಗಿ ತೂಗಿಸಿಕೊಂಡು ಹೋಗಿದ್ದಾರೆ.ಚಿತ್ರದಲ್ಲಿ Fightings ತುಂಬಾ ಚೆನ್ನಾಗಿ ಬಂದಿದೆ. ಧ್ರುವ ಸರ್ಜಾ ಓಳ್ಳೇ stunts ಮಾಡಿದ್ದಾರೆ



ಒಟ್ಟಿನಲ್ಲಿ ಅದ್ಧೂರಿ ಅದ್ಧೂರಿಯಾಗಿದೆ.

Sunday, May 20, 2012

ಕಠಾರಿವೀರ ಸುರಸುಂದರಾಂಗಿ


ಕಠಾರಿವೀರ ಸುರಸುಂದರಾಂಗಿ ಸಿನಿಮಾ ತಂಡ ಪ್ರೇಕ್ಷಕರಿಗೆ ನರಕ ಅಂದರೆ ಹೇಗಿರುತ್ತೆ ಸ್ವರ್ಗ ಅಂದರೆ ಹೇಗಿರುತ್ತೆ. ನರಕಕ್ಕೆ ಯಾರು ಹೋಗುತ್ತಾರೆ ಮತ್ತೆ ಸ್ವರ್ಗಕ್ಕೆ ಎಂತವರು ಅಂತ ತೋರಿಸುವುದಕ್ಕೆ ಹೋಗಿ 3 ತಾಸಿನಲ್ಲಿ ಚಿತ್ರಮಂದಿರದ ಒಳಗಡೆನೆ ಪ್ರೇಕ್ಷಕರಿಗೆ ತಾವು ಕುಳಿತಲ್ಲೆನೆ ಸಂಪೂರ್ಣ ನರಕ ಅಂದ್ರೆ ಹೇಗಿರುತ್ತೆ ಅಂತ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಅಂದರೆ ತಪ್ಪಾಗಾಲಾರದು.

ಒಟ್ಟಿನಲ್ಲಿ ಕಠಾರಿವೀರ ಸುರಸುಂದರಾಂಗಿ ಸುಂದರವಾಗಂತು ಇಲ್ಲ ಕುರೂಪಿಯಾಗಿದೆ.ನರಕ ಅಂದರೆ ಹೇಗಿರುತ್ತೆ ಅಂತ ಕೇಳಿದ್ವಿ ಆದರೆ ಈ ಸಿನಿಮಾ ನೋಡಿದಮೇಲೆ ಅನುಭವಿಸಿ ಬಂದಿದ್ದಿವಿ ಅನಿಸುತ್ತಿದೆ. ಸಿನಿಮಾ ಮುಗಿಸಿ ಹೋರಗಡೆ ಬಂದ ಮೇಲೆ ಅನಿಸಿತು ಅಬ್ಬ ಬೆಂಗಳೂರನ್ನೆ ನರಕ ಅಂತಿದ್ವಿ ಆದ್ರೆ ಈ ಸಿನಿಮಾ ಅದಕ್ಕಿಂತ ನರಕ ಅನಿಸಿತು.

ದಯವಿಟ್ಟು ಕನ್ನಡ ಅಭಿಮಾನಿಗಳು ನನ್ನನ್ನ ಕ್ಷಮಿಸಬೇಕು ಈ ನನ್ನ ವಿಮರ್ಶೆಯಿಂದ ನಿಮ್ಮ ಮನಸ್ಸಿಗೆ ಎನಾದರು ನೋವಾಗಿದ್ದರೆ.

ಏನು ಮಾಡೋದು ಸತ್ಯ ಅನ್ನೋದು ಕಹಿ ಔಷದಿ ಇದ್ದ ಹಾಗೆ ಸುಳ್ಳು ಅನ್ನೋದು ಮಜ ಕೋಡುವ Alchohalಇದ್ದ ಹಾಗೆ.

Saturday, May 12, 2012

ತಾಯಂದಿರ ದಿನದ ಶುಭಾಶಯಗಳು

ಜಗದೊಳಗೆ ಮೊದಲು ಜನಿಸಿದವಳು,ಇಡಿ ಜಗತ್ತನ್ನೆ ತೂಗಿದವಳು ಅವಳು, ಭೂಮಿಯಲ್ಲಿ ಕಣ್ಣಿಗೆ ಕಾಣುವ ಗುಡಿಯಿರದ ದೈವವೋಬ್ಬಳೆ ಅವಳು, ಸೃಷ್ಟಿಸೋ ಜೀವ ಅವಳು ಇಷ್ಟೆಲ್ಲಾ ಬಣ್ಣಿಸುತ್ತಿರುವುದು ಯಾರನ್ನ ಅಂತಿರ ಅವಳೆ ಪದಗಳಿಗೆ ಸಿಗದ ಗುಣದವಳನ್ನ ಅವಳೇ ಅಮ್ಮ.

ಅಮ್ಮ ಆ ಶಬ್ದವೇ ಹಾಗೆ ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ ಅಮ್ಮ ಅಮ್ಮ ಐ ಲವ್ ಯು…

ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಎರಡು ಸ್ವರ್ಗಗಳನ್ನ ನೋಡಿರುತ್ತಾರೆ ಮೊದಲನೆಯದು ಹುಟ್ಟುವುದಕ್ಕಿಂತ ಮುಂಚೆ ತಾಯಿಯ ಒಡಲಿನಲ್ಲಿ ಎರಡನೆಯದು ಹುಟ್ಟಿದ ಮೇಲೆ ತಾಯಿಯ ಮಡಿಲಿನಲ್ಲಿ.

ಒಂಭತ್ತು ತಿಂಗಳು ಹೆತ್ತು ಹೊತ್ತು ಮಮತೆ,ಕರುಣೆ,ಪ್ರೀತಿ,ವಾತ್ಸಲ್ಯ,ತ್ಯಾಗ ಮತ್ತೆ ಎರಡೆರಡು ಸ್ವರ್ಗಗಳನ್ನ ತೋರಿಸಿಕೊಟ್ಟಿರೊ ನಮ್ಮ ಅಮ್ಮನಿಗೆ ನಾವು ಏನು ಕೊಟ್ಟರು ಸಾಲದು. ಅಂತ ತಾಯಿಗೆ ಮಕ್ಕಳಾದ ನಮ್ಮಿಂದ ಆನಂದ ಒಂದು ತಂದರೆ ಸಾಕಲ್ವ. ಕಣ್ಣಿಗೆ ಕಾಣುವ ಆ ದೇವರಿಗೆ ಇದಕ್ಕಿಂತ ಹೆಚ್ಚಿಗೆ ಮಕ್ಕಳಿಂದ ಏನನ್ನು ಕೋಡೊಕೆ ಹಾಗೋಲ್ಲ ಅಂತಿನಿ

Being a full-time mother is one of the highest salaried jobs….Since the payment is pure love.

ಜಗತ್ತಿನ ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳು.

ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತೆ ಈ ದುನಿಯದಲ್ಲಿ Mothert Love ಒಂದು ಬಿಟ್ಟು.

Wednesday, June 22, 2011

ನಂಬಿಕೆನೆ ದೇವರು ಪ್ರೀತಿನೆ ಜಾತಿ

ಅದು ಎಲ್ಲೆಲ್ಲು ಇದೆ ಎಲ್ಲರಲ್ಲು ಇದೆ ಎಲ್ಲದರಲ್ಲು ಇದೆ ಕೋಟಿ ರೂಪದಲ್ಲಿ ಕಾಣಿಸಿಕೊಳ್ಳುವ ಅದಕ್ಕೆ ಜಗತ್ತಿನ ಹೂ ಮನಸಿಗರೆಲ್ಲ ಸೇರಿ ಇರಿಸಿದ ಒಂದು ಸುಂದರವಾದ ಹೆಸರೆ ಅದು ಪ್ರೀತಿ.

ಹೇಳಿ ಬರುವುದು ಜೀವನ. ಹೇಳದೆ ಬರುವುದು ಸಾವು. ತಿಳಿದು ತಿಳಿಯದೆ ಆಗುವುದು ಪ್ರೀತಿ.

ಪ್ರೀತಿನೆ ಹಾಗೆ ಅದು ಹುಟ್ಟಬೇಕಾದ್ರೆ ಯಾರಿಗು ಹೇಳಿ ಕೇಳಿ ಹುಟ್ಟೊಲ್ಲ ಹುಟ್ಟೊಕೆ ಯಾರ ಅಪ್ಪಣೆನು ಬೇಕಿಲ್ಲ ಸ್ವಂತ ಪ್ರೀತಿಸೊ ಎರಡು ಜೀವಗಳದ್ದು ಅನ್ನಬಹುದು.ಹಾಗೆ ಹುಟ್ಟಿದ ಪ್ರೀತಿ ಬೆಳೆದೆ ಬೆಳೆಯುತ್ತೆ ಅದನ್ನ ತಪ್ಪಿಸೊಕೆ ಯಾರಿಂದನು ಸಾದ್ಯವಿಲ್ಲ ಯಾವಾಗ ಅಂದ್ರೆ ಪ್ರೀತಿಸುವ ಎರಡು ಹ್ರುದಯಗಳ ಸಂಪೂರ್ಣ ಒಪ್ಪಿಗೆ ಇದ್ರೆ ಮಾತ್ರ.

ಈಗಿರುವಾಗ, ಪ್ರೀತಿ ಮಾಡೋದು ತಪ್ಪು ಅಲ್ಲ ಹಾಗೆ ಹುಟ್ಟಿದ ಪ್ರೀತಿನ ಬೆಳೆಯೋಕೆ ಬೀಡೊದು ತಪ್ಪೆನು ಅಲ್ಲ ಅದ್ರೆ ಪ್ರೀತಿ ಅನ್ನೋದು ಎರಡು ಹ್ರುದಯಗಳ ನಡುವೆ ಹುಟ್ಟಿದ ಮೇಲೆ ಅದೆ ಎರಡು ಹ್ರುದಯಗಳು ಅದಕ್ಕೆ ಪೋಷಣೆ ಮಾಡಿ ಅದು ಸ್ವಚ್ಚಂದವಾದ ಪ್ರೆಮಲೋಕದಲ್ಲಿ ಪಾರಿಜತದ ತರಹ ಹಾರಡುವಾಗ ಅದರ ರೆಕ್ಕೆ ಮುರಿದು ಬೀಳೊ ಹಾಗೆ ಅದೆ ಹ್ರುದಯಗಳು ಮಾಡ್ತವೆ ಅಲ್ವ ಅದು ತಪ್ಪು.

ಈ ಜಗತ್ತಿನಲ್ಲಿ ನೂರಕ್ಕೆ ಶೇಕಡ 80 ರಸ್ಟು ಪ್ರೀತಿ ಈ ತರದ್ದೆ.

ಪ್ರೀತ್ಸೊ ಎರಡು ಹ್ರುದಯಗಳ ಮದ್ದೆ ಹುಟ್ಟಿದ ಪ್ರೀತಿಗೆ ಒಂದು ಅರ್ಥ ಸೀಗೊದೆ ಅವರು ತಮ್ಮ ಜೀವನದಲ್ಲಿ ಅವರ ಕೊನೆಯ ಉಸಿರು ಇರುವ ತನಕ ತಾವೆ ಹುಟ್ಟಿಸಿದ ಪ್ರೀತಿನ ತಮ್ಮೊಟ್ಟಿಗೆ ಪೋಷಣೆ ಮಾಡಿಕೊಂಡು ಆ ಪ್ರೀತಿನ ಸಾಹಿಸದೆ ಹೋದಾಗ ಮಾತ್ರ ಇಲ್ಲ ಅಂದ್ರೆ ಅದು ತಾವು ಊಟ ಮಾಡಿದ ಮೇಲೆ ಬಿಸಾಡೊ ಎಲೆ ತರಹ ಇಲ್ಲ ನಾವು ಹುಟ್ಟು ಬದಲಾಯಿಸೊ ಬಟ್ಟೆ ತರ ಹಾಗಿ ಹೋಗಿಬಿಡುತ್ತೆ.

ಹಾಗ ಪ್ರೀತಿ ಅನ್ನೊ ಎರಡಕ್ಷರಕ್ಕೆ ಸಿಗುವಂತಹ ಬಿರುದು "ಪ್ರೀತಿ ಕುರುಡು ಪ್ರೀತಿಸುವವರು ಕುರುಡರೆ" ಅಂತ.

ಈ ತರಹದ ತಪ್ಪುಗಳು ಪ್ರೀತ್ಸೊ ಎರಡು ಹ್ರುದಯಗಳ ನಡುವೆ ಆಗೋದಕ್ಕೆ ಕಾರಣ ತಾವೆ ಹುಟ್ಟಿಸಿ ಬೆಳೆಸಿದ ಪ್ರೀತಿ ಮೇಲೆ ಇಬ್ಬರಲ್ಲಿ ಯಾರ ಒಬ್ಬರಿಗೂ ಸಹ ತಮ್ಮ ಪ್ರೀತಿ ಮೇಲೆ ನಂಬಿಕೆ ಇಲ್ಲದೆ ಇರುವಗಾ ಮತ್ತೆ ಪ್ರೀತ್ಸೊ ಎರಡು ಜೀವಗಳಲ್ಲಿ ಯಾರ ಒಬ್ಬರಿಗೂ ಸಹ ತಾಳ್ಮೆ ಕಡಿಮೆ ಆದಾಗ. ತಾಳ್ಮೆ ಯಾಕೆ ಅಂತಿರ ಮನೆಯಲ್ಲಿ ಹಿರಿಯರಿಗೆ ನಮ್ಮ ಪ್ರೀತಿನ ಒಪ್ಪಿಕೊಳ್ಳೊ ಹಾಗೆ ಮಾಡಬೇಕು ಅಲ್ವ ಅದಕ್ಕೆ. ಆ ನಂಬಿಕೆನ ಕಳೆದುಕೊಂಡು ಮತ್ತು ತಾಳ್ಮೆ ಅನ್ನೋದು ಏನಾದ್ರು ಕಡಿಮೆ ಹಾಗಿ ಅವಸರ ಪಟ್ಟು ನಿರ್ಧಾರಕ್ಕೆ ಬಂದ್ರೆ ಹಾಗುವ ಅನಾಹುತವೆ ಹ್ರುದಯ ವಿಚ್ಚೇದನ ಇಂಗ್ಲಿಷ್ ನಲ್ಲಿ ಹೇಳಬೇಕು ಅಂದ್ರೆ Break UP.

ಪ್ರೀತಿ ಮಾಡೋದು ಸುಲಭ(ಅಷ್ಟೊಂದು ಸುಲಭ ಏನು ಅಲ್ಲ) ಅದ್ರೆ ಪ್ರೀತಿ ಮಾಡಿದ ಮೇಲೆ ಆ ಪ್ರೀತಿನ( ಅದು ಕೆವಲ ಎರಡು ದಿವಸ,ಎರಡು ತಿಂಗಳು ಇಲ್ಲ ಅಂದ್ರೆ ಎರಡು ವರ್ಷದ್ದೆ ಹಾಗಿರಬಹುದು) ಹುಳಿಸಿಕೊಳ್ಳೋಕೆ ಆಗದೆ ಆ ಪ್ರೀತಿ ನ ಕಳೆದುಕೊಂಡು ಒಬ್ಬಂಟಿಯಾಗಿ ಕಳೆದುಕೊಂಡವರನ್ನಾ ನೆನಸಿಕೊಂಡು ಅನುಭವಿಸುವ ಆ ನೋವು ಸಂಕಟ ಇದೆ ಅಲ್ವ ಅದು ತುಂಬಾನೆ ಕಸ್ಟ. ಅದು ನಾವುಗಳು ಆ ಪ್ರೇಮಲೋಕದಲ್ಲಿ ಅನುಭವಿಸಿದ ಆನಂದಕ್ಕೆ ನಾವು ಕಟ್ಟುವ ಸುಂಕ ಅಂದರು ತಪ್ಪಾಗಲಾರದು.

ಬಟ್ಟೆ ಹಾಳು ಆದರೆ ಹೊಸದು ಒಂದು ತಗೊಬಹುದು ಆದರೆ ಪ್ರೀತಿ ಆಗಲ್ಲ. ಮಾತು ಆಡಿದರೆ ಹೊಯಿತು ಮುತ್ತು ಹೊಡೆದರೆ ಹೊಯಿತು ಅಂತಾರಲ್ಲಾ ಆಗೆ. ಪ್ರೀತಿ ಅನ್ನೋದು ಒಂದು ತಪಸ್ಸು. ಜೀವನದಲ್ಲಿ ಏನು ಬೇಕಾದರು ಕಳೆದುಕೊಂಡರು ಮತ್ತೆ ವಾಪಸ್ ಪಡೆಯಬಹುದು ಆದರೆ ಕಳೆದು ಹೊದ ಮತ್ತದೆ ಸಮಯವನ್ನ ಮತ್ತದೆ ಪ್ರೀತಿನ ಪಡೆಯೋಕೆ ಸಾದ್ಯವೆಇಲ್ಲ

ಸ್ವಚ್ಚಂದವಾದ ಪ್ರೆಮಲೋಕದಲ್ಲಿ ಪಾರಿಜತದ ತರಹ ಹಾರಡುತ್ತಿರುವ ಎಲ್ಲಾ ಪ್ರೇಮಿಗಳ ಹತ್ತಿರ ಈ ನಿಮ್ಮ ಸ್ನೇಹಿತ ಕೇಳಿಕೊಳ್ಳೊದು ಇಸ್ಟೆ ಯಾವತ್ತು ನೀವು ಪ್ರೇಮಿಗಳು ನೀವುಗಳು ಪ್ರೀತ್ಸೊ ಆ ನಿಮ್ಮ ಪ್ರೀತಿಯ ಮೇಲಿನ ನಂಬಿಕೆ ನಾ ಕಳೆದುಕೊಳ್ಳಬೇಡಿ ಮತ್ತೆ ಹಾಗೆಯೆ ತಾಳ್ಮೆನು ಸಹ. ಆ ನಂಬಿಕೆ ಮತ್ತು ತಾಳ್ಮೆ ನಿಮ್ಮ ಪ್ರೀತಿ ಒಟ್ಟಿಗೆ ಇತ್ತು ಅಂದ್ರೆ ನೀವು ಹುಟ್ಟಿಸಿ ಬೆಳೆಸಿದ ಆ ಪ್ರೀತಿಗೆ ಒಂದು ಒಳ್ಳೆ ಅರ್ಥ ಕೊಟ್ಟ ಹಾಗೆ ಹಾಗುತ್ತೆ ಮತ್ತು ಬೆಲೆನೆ ಕಟ್ಟೊಕೆ ಹಾಗದೆ ಇರುವ ಪ್ರೀತಿಯ ಹೆಸರನ್ನು ಉಳಿಸಿದವರಲ್ಲಿ ನೀವು ಒಬ್ಬರು ಹಾಗ್ತಿರ.ಏನಂತಿರ?

ಈ ಪ್ರೀತಿನ ಪ್ರೀತಿಯಿಂದ ಪ್ರೀತಿಸಿದರೆ ಪ್ರೀತಿ ಪ್ರೀತಿಯಾಗಿರುತ್ತೆ ಏಕೆಂದರೆ ಪ್ರೀತಿಯನ್ನು ಪ್ರೀತಿಸುವ ಪ್ರೀತಿ ಪ್ರೀತಿಗಾಗಿ ಪ್ರೀತಿಸುವ ಪ್ರೀತಿಯನ್ನು ಪ್ರೀತಿಸುತ್ತದೆ ! ಅಲ್ವ !

Sunday, June 27, 2010

ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಜಾತಕ ಇಲ್ಲದೆ ಇರುವುದು ಅದುವೆ - ಪ್ರೀತಿ

ಆರು ತಿಂಗಳ ಹಿಂದೆ...........

ಇತ್ತಿಚಿನ ದಿನಗಳಲ್ಲಿ ಅಮ್ಮನಿಗೆ ಪೋನ್ ಮಾಡಿದಾಗ ಮಾತಾಡ್ತಾ ಮಾತಾಡ್ತ ಏನಮ್ಮ ತಿಂಡಿ ಅಂದರೆ ನಿಮ್ಮ ಮಾವ ಊರಿಂದ ಹಸಿ ಅವರೆ ತಂದಿದ್ದ ಅವರೆಕಾಳು ಉಪ್ಪಿಟ್ಟು ಮಾಡಿದಿನೋ ಅಂತಿದ್ದಳು.ಯಾಕೆಂದರೆ ಆಗ ಅವರೆಕಾಳು season ಅಲ್ವ ಅದಕ್ಕೆ.ನೋಡಮ್ಮ ನಾನು ಬರೋ ವಾರ ಮೂರು ದಿವಸ ರಜೇ ಇದೆ ಊರಿಗೆ ಬರ್ತಿನಿ ಅವರೆಕಾಳು ಉಪ್ಪಿಟ್ಟು ಮಾಡಿಕೋಡಬೇಕು ಅಂತ ಹೇಳಿದೆ. ಆ ಮಾತಿನಂತೆ ಅಮ್ಮ ಮೊನ್ನೆ ಕ್ರೀಸ್ ಮಸ್ ರಜೆಗೆ ಮನೆಗೆ ಹೋದಾಗ ಅವರೆಕಾಳು ಉಪ್ಪಿಟ್ಟು ಮಾಡಿಕೊಟ್ಟಳು. ಅಮ್ಮ ಮಾಡಿದ ಬಿಸಿಬಿಸಿ ಅವರೆಕಾಳು ಉಪ್ಪಿಟ್ಟುನ ಚಟ್ನಿ ಪುಡಿಗಳನ್ನ ಹಾಕಿಕೊಂಡು ಒಳ್ಳೆ ಭಕಾಸುರನ ಹಾಗೆ ತಿಂದು ಕೈ ತೊಳೆದುಕೊಂಡು ಕಾಫಿ ಪೇಯವನ್ನು ಹಿರುತ್ತ ಕುಳಿತೆ.ಈ ಬಾರಿ ಊರಿನಿಂದ ನನ್ನ ದೊಡ್ಡಪ್ಪನು ಮನೆಗೆ ಬಂದಿದ್ದರು ಹಾಗೆ ಕಾಫಿ ಕುಡಿತ ಕುಡಿತ ದೊಡ್ಡಪ್ಪ ಮತ್ತು ಅಮ್ಮನ ಜೊತೆ ಮಾತಡ್ತ ಕುಳಿತೆ.

ಅಮ್ಮ ಮಾತಿನ ಮದ್ಯೆ ನನ್ನ ದೊಡ್ಡಪ್ಪನ ಹತ್ತಿರ ನನ್ನ ಮದುವೆ ವಿಷಯ ಮಾತಡಿದಳು. ಮಾವ ಈ ವರ್ಷ ಇವನ ಮದುವೆ ಮಾಡಬೇಕು ಅಂತ ಅಂದಳು. ಊನವ್ವ ಈ ವರ್ಷ ಬಿತ್ತ ಸುಗ್ಗಿ ಮುಗಿಲಿ ಹೆಣ್ಣು ನೋಡಿ ವಾಲಾಗ ಊದಿಸಿಬಿಡೋಣ ಅಂದ ನನ್ನ ದೊಡ್ಡಪ್ಪ.ಸುಮ್ನೆ ಕುಂತಿಯಲ್ಲೊ ಏನಾದರು ಮಾತಾಡು ಅಂದ್ರು ನಿನ್ನ ವಯಸ್ನಾಗೆ ನನಗೆ ಇಬ್ಬರು ಮಕ್ಕಳು ಇದ್ರು ಕಣ್ಲ ಅಂದ್ರು. ಹೌದು ದೊಡ್ಡಪ್ಪ ಮದುವೆ ಆದ್ರೆ ಅಲ್ವ ಮುಂದೆ ಮಕ್ಕಳು ಎಲ್ಲಾ ಹಾಗೆ ಹೇಗೆ ಹಾಗ್ತವೆ ಹೇಳ್ರಿ ಅಂತ ನನ್ನ ದೊಡ್ಡಪ್ಪನ ಹತ್ತಿರ ತಮಾಷೆ ಮಾಡಿದೆ. ದೊಡ್ಡವರ ಹತ್ತಿರ ಹೇಗೆ ಮಾತಡಬೇಕು ಅಂತನು ಗೊತ್ತಿಲ್ಲ ಅಂತ ಅಮ್ಮ ಬೈದಳು ಸುಮ್ನೆ ಕುಳಿತೆ.

ಕನ್ಯಾ ನೋಡ್ತಿವಿ ಮದುವೆ ಆಗಿ ಬೀಡು ಅಂದರು. ದೊಡ್ಡವರು ಹೇಳಿದ ತಕ್ಷಣ ಒಪ್ಪಿಕೊಂಡರೆ ಎಲ್ಲಿ ಹುಡುಗ ಬಾರಿ fast ಇದಾನೋ ಅಂತ ತಿಳಿಕೊಂಡುಬಿಡ್ತಾರೋ ಅಂತ ಸುಮ್ನೆ ಮಾತಿಗೆ ಇರಲಿ ಅಂತ ಇಷ್ಟು ಬೇಗಾನ ಯಾಕಮ್ಮ ಇನ್ನೊಂದೆರಡು ವರ್ಷ ಬಿಟ್ಟು ಹಾಗ್ತಿನಿ ಅಂತ ಅಂದೆ. ಹಾಗೆ ಭಯನು ಆಯ್ತು ಮದುವೆ ಆಗೋಕೆ ಅಲ್ಲಾ ಎಲ್ಲಿ ನಾನು ಹೇಳಿರೊ ಮಾತನ್ನ ಸೀರಿಯಸ್ ಆಗಿ ತಗೋಂಡು ಇನ್ನು ಎರಡು ವರ್ಷ ಮದುವೆ ವಿಷಯ ತಗೆಯದೆ ಇರ್ತಾರೊ ಅಂತ.

ಅದಕ್ಕೆ ಅಮ್ಮ ನೀನೆನು ಚಿಕ್ಕ ಹುಡುಗ ಏನೋ ನಿನ್ನ Friendsಗಳು ಎಲ್ಲಾ ಮದುವೆ ಆಗ್ತಾ ಇಲ್ವ ನೀನು ಆಗೋ ಅಂದ್ರು.ಹಾಗದ್ರೆ ಅವರು ಎಲ್ಲಾ ಲವ್ ಮಾಡಿ ಮದುವೆ ಹಾಗ್ತ ಇದ್ದಾರೆ ನಾನು ಯಾವುದಾದಾರು ಹುಡುಗಿನ ಲವ್ ಮಾಡಿ ಕರೆದುಕೊಂಡು ಬಂದು ನಿನ್ನ ಮುಂದೆ ನಿಲ್ಲಿಸಿ ಅಮ್ಮ ಇವಳೆ ನಿನ್ನ ಸೊಸೆ ನಮಗೆ ಮದುವೆ ಮಾಡು ಅಂದ್ರೆ ಮಾಡಿಸ್ತೀಯ ಅಂದೆ. ನೋಡು ನಾವು ತಮಾಷೆ ಮಾಡ್ತ ಇಲ್ಲ ಅಂದು ಅಮ್ಮ ಸ್ವಲ್ಪ ಸೀರಿಯಸ್ ಆದಳು. ನನಗೊ ಮನೆ ಕೆಲಸ ಮಾಡಿ ಮಾಡಿ ಸಾಕಾಗಿ ಹೋಗೈತಿ ಮನೆಗೆ ಸೊಸೆ ಮಂದರೆ ಅವಳು ಸ್ವಲ್ಪ ಮನೆ ಜವಾಬ್ದಾರಿ ತಗೋಳ್ತಾಳೆ ಅಂದಳು.

ಮನೆ ಕೆಲಸ ಮಾಡೋಕೆ ಸೊಸೆನೆ ಬೇಕಾ ಮನೆ ಕೆಲಸದವಳನ್ನ ಇಟ್ಟುಕೊಂಡರೆ ಆಯ್ತು ಬಿಡಮ್ಮ ಅಂದೆ. ಬಟ್ಟೆ wash ಮಾಡೋಕೆ ಅಂತ washing machine ಇದೆ, ಇನ್ನು ...... ಕೆಲಸಕ್ಕೆ ...... ಇದವೆ ಅದಕ್ಕೆ ಮದುವೆನೆ ಆಗಬೇಕ ಅಂತ ತಮಾಷೆ ಮಾಡಿದೆ.

ಮತ್ತು ತಮಾಷೆ ನೋಡು ನಿಂದು ಎಂತ ಹುಡುಗಿ ಬೇಕು ಹೇಳು? ಹುಡುಕ್ತಿವಿ ಅಂದ್ರು. ನಾನು ಓಂದು ಕ್ಷಣ ಏನನ್ನು ಮಾತನಾಡದೆ ಸುಮ್ನೆ ಕೂತಿದ್ದೆ.

ನನ್ನ ಅಮ್ಮನಿಗೆ ಮನಸ್ಸಿನಲ್ಲೆ ಸಂಶಯ ಇತ್ತು ಅನಿಸುತ್ತೆ ಕೊನೆಗೂ ತಡಿಲಾರದೆ ಕೇಳಿಬಿಟ್ಟಳು ನೀನು ಯಾರನ್ನಾದರು ಹುಡುಗಿನ ಇಷ್ಟ ಪಟ್ಟಿದಿಯೇನೋ ಅಂತ ಕೇಳಿದಳು.
ನಿನಗೆ ಯಾಕಮ್ಮ ಇಂತ ಡೌಟ್ ಬಂತು ಅಮ್ಮ ನಾನು ನಿನ್ನ ಮಗ ನನ್ನ ಮೇಲೆ ನಿನಗೆ ನಂಬಿಕೆ ಇಲ್ವಾ ಅಂದೆ. ಅದಕ್ಕೆ ಅಮ್ಮ ನಿನ್ನ ಮೇಲೆ ನನಗೆ ನಂಬಿಕೆ ಇದೆ ಕಣೋ ಆದ್ರೆ ಈ ನಿನ್ನ ವಯಸ್ಸಿನ ಮೇಲೆ ನನಗೆ ನಂಬಿಕೆ ಇಲ್ಲಾ ಅದಕ್ಕೆ ಅಂದ್ರು.ಕೋನೆಗೆ ಅಮ್ಮ ನೋಡು ನೀನು ಬೇಕಾದರೆ ಪ್ರೀತಿ ಮಾಡಿಬಿಟ್ಟೆ ಮದುವೆ ಆಗಪ್ಪಾ ನಾನು ಬೇಡ ಅನ್ನೊಲ್ಲ ಆದರೆ ನೀನು ಪ್ರೀತಿಸೊ ಹುಡುಗಿ ಇದಳಲ್ಲ ಅವಳು ಮಾತ್ರ ನಮ್ಮ ಜಾತಿಯವಳೆ ಆಗಿರಬೇಕು ಅಂದ್ರು. ನನಗೆ ಆ ಮಾತು ಕೇಳಿ ನುಂಗಲಾರದೆನೆ ಬಿಸಿ ತುಪ್ಪನ ಬಾಯಿಯಲ್ಲಿ ಇಟ್ಟು ಕೊಂಡ ಹಾಗೆ ಹಾಯ್ತು. ಒಂದೆ ಸಲ green signal ಕೊಟ್ಟು red signal ಹಾಕಿದ ಹಾಗೆ ಆಯ್ತು.

ಆಮೇಲೆ ನನ್ನ Youth dialogues start ಆಯ್ತು. ನೋಡಮ್ಮ LOVE IS BLIND ಪ್ರೀತಿ ಕುರುಡು ಕಣಮ್ಮ. ಈ ಪ್ರೀತಿ ಆನ್ನೊದು ಒಂದು ಆಕರ್ಷಣೆ. ಅದು ಹುಟ್ಟಬೇಕಾದ್ರೆ ಯಾರಿಗೂ ಹೇಳಿ ಕೇಳಿ ಹುಟ್ಟಲ್ಲ ಹುಟ್ಟಕ್ಕೆ ಯಾರ ಅಪ್ಪಣೆನು ಬೇಕಿಲ್ಲ ಅಮ್ಮ. ಈ ಭೂಮಿ ಮೇಲೆ ಹುಟ್ಟಿದ ಮೇಲೂ ಅದು ಯಾವ ಜಾತಿ ಅಂತ ಹೇಳೊಕೆ ಆಗದೆ ಇರುವಂತಹದು ಅಂದರೆ ಅದು ಪ್ರೀತಿ. ಅದು ಯಾವ ಜಾತಿ ಮತ ಅಂತ ನೋಡಿ ಹುಟ್ಟಲ್ಲ."ನಮ್ಮ ಮೇಲೆ ಕರುಣೆನೆ ಇಲ್ಲದೆ ಇರೋ ಸಾವು ಕೋಡ ಕೆಲವೂಂದು ಸಲ ನಮಗೆ ಸುಳಿವು ನೀಡಿ ನಮ್ಮ ಹತ್ತಿರ ಸುಳಿಯುತ್ತೆ ಆದರೆ ಈ ಪ್ರೀತಿ ಇದೆಯಲ್ಲಾ ಅದು ಎದೆಯ ಬಾಗಿಲನ್ನು ತಟ್ಟದೆ ತಿಳಿದು ತಿಳಿಯದನೆ ನಮ್ಮ ಮನಸ್ಸಿನಲ್ಲಿ ಬಂದು ಸೇರಿಕೊಂಡುಬಿಡುತ್ತೆ."

ಹೋಗ್ಲಿ ಬಿಡಮ್ಮ ನಾನು ಆ ಸಾಹಸಕ್ಕೆ ಕೈ ಹಾಕೊಕ್ಕೆ ಹೋಗಿಲ್ಲಾ. ಆ ವಿಷಯದಲ್ಲಿ ನಿನ್ನ ಮಗನಿಗೆ ಧೈರ್ಯನು ಕಮ್ಮಿನೆ ಅಂತ ಅಂದು ಮಾತು ಮುಗಿಸಿ ನನ್ನ ದೊಡ್ಡಪ್ಪನ ಬಸ್ ಸ್ಟಾಂಡ್ಗೆ ಬೀಡೊಕೆ ಅಂತ ಬೈಕ್ ಹೇರಿ ಹೊರಟೆ.