ಮೈನಾ = COLOURFULLLLLL...!
ನಾಗಶೇಖರ ಅವರು ಪ್ರೇಮಿಗಳು ಸತ್ತರು ಅವರ ಪ್ರೀತಿಗೆ ಸಾವಿಲ್ಲ ಅಂತ ತೋರಿಸುವ ತಮ್ಮ ಚಿತ್ರ ಪರಂಪರೆಯನ್ನ ಮೈನಾ ಚಿತ್ರದ ಮೂಲಕ ಮುಂದುವರೆಸಿಕೊಂಡು ಹೋಗಿದ್ದಾರೆ.
ಸತ್ಯ ಹೆಗ್ದೆ ಅವರ camera ಕೈಛಳಕದಿಂದ ಮೈನಾ ಸಿನಿಮಾ ಮೈನಾ ಹಕ್ಕಿಯಷ್ಟೆ COLOURFULLLLLL..! ಆಗಿ ತುಂಬಾ ಅಧ್ಬುತವಾಗಿ ಮೂಡಿಬಂದಿದೆ.
ಜೆಸ್ಸಿ ಗಿಫ್ಟ್ ಅವರ ಸಂಗೀತ ಮತ್ತು ಕವಿರಾಜ್ ಅವರ "ತೆಗೆದುಕೊಂಡು ಕೋಂಚವೆ ನಿನ್ನ ಕಣ್ಣ್ಗಾಡಿಗೆ ದೃಷ್ಟಿ ಬೊಟ್ಟು ಇಡಲೆ ನಾ ನಿನ್ನ ಅಂಗಾಲಿಗೆ"(Sample lines) ಅನ್ನೊ ಸಾಹಿತ್ಯ ತುಂಬಾ ಸೋಗಸಾಗಿದೆ.
ಕಲಾವಿದ/ದೆ ತನಗೆ ಎಂತ ಪಾತ್ರವನ್ನು ಕೊಟ್ಟರು ಅದಕ್ಕೆ ಜೀವ ತುಂಬ ಬೇಕು ಅದನ್ನು ಮಾಡುವಲ್ಲಿ ನೀತ್ಯ ಮೇನನ್ ಅವರು ಯಶಸ್ವಿ ನಟಿ ಆಗಿದ್ದಾರೆ.
ಇನ್ನು ನಾಯಕ ಚೇತನ್, ಪೋಲಿಸ್ ಅಧಿಕಾರಿ ಪಾತ್ರವನ್ನು ಮಾಡಿರುವ ತೆಲುಗು ಚಿತ್ರರಂಗದ ಮೇರು ನಟ ಶರತ್ ಕುಮಾರ್ ಮತ್ತು ಸಿದ್ಲಿಂಗು ಆಂಡಳಮ್ಮ ಸುಮನ ರಂಗನಾಥ್ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ.
ಕಥೆಯಲ್ಲಿ ಅಂತ ಹೋಸತನವೇನು ಇಲ್ಲ ಆದರೆ ಮೈನಾ ಸಿನಿಮಾದ ಅದ್ಭುತ ದೃಶ್ಯ ವೈಭವ ನಿಮ್ಮನ್ನು ಬೇರೆ ಜಗತ್ತಿಗೆ ಎಳೆದೊಯ್ಯಲಿದೆ.ಚಿತ್ರದ ಹಾಡುಗಳು ಹಾಗೂ ಅದರ ಚಿತ್ರೀಕರಣ ನೋಡಲು ಥೇಟರ್ ಗೆ ಬಂದರೂ ಟಿಕೆಟ್ ದುಡ್ಡಿಗೆ ನಷ್ಟವಿಲ್ಲ.
ನಾಗಶೇಖರ ಅವರು ಪ್ರೇಮಿಗಳಿಗೆ ಅವರ ಪ್ರೀತಿನ express ಮಾಡೋಕೆ ಅಂತ ಒಂದು ಹೊಸ ಕೋಡ್ ವರ್ಡ್ ನ ಸೃಷ್ಟಿ ಮಾಡಿದ್ದಾರೆ COLOURFULLLLLL ಅಂತ. ಕೋಡ್ ವರ್ಡ್ ಬಗ್ಗೆ ಮಾಹಿತಿ ಪೂರ್ಣವಾಗಿ ಬೇಕು ಅಂದರೆ theater ಹೋಗಿ ಸಿನಿಮಾ ನೋಡಿ.
ಸುವಾಸನೆಯ ಮಳೆ
15 years ago
No comments:
Post a Comment