Wednesday, December 31, 2008

ಬಂದಿದೆ ಹೊಸ ವರ್ಷ, ಇರಲಿ ಹೊಸ ಹರ್ಷ

ನಮಸ್ಕಾರ,

ಮತ್ತೊಂದು ವರ್ಷವನ್ನು ಹಿಂದಿಕ್ಕಿ, ಇನ್ನೊಂದು ಹೊಸವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ ನಾವು. ಎಲ್ಲೆಡೆ ಶುಭಾಶಯಗಳ ಭರಾಟೆ, ಬಂಧು ಮಿತ್ರರು, ಆಪ್ತರು, ಆತ್ಮೀಯರು, ಪ್ರೀತಿ ಪಾತ್ರರಿಗೆ ಶುಭಹಾರೈಸುವ ತವಕ. ಮಧ್ಯೆ ನೆಟ್‌ವರ್ಕ್ ಜಾಮ್ ಕುಹಕ.

ಈ ಮಧ್ಯೆ ಇದು ನಮ್ಮ ಸಂಸ್ಕೃತಿ ಅಲ್ಲ, ಇದು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ, ನಮ್ಮ ಹೊಸವರ್ಷವೇನಿದ್ದರೂ ಯುಗಾದಿ ಎಂಬ ಕೆಲ ಅಸಮಾಧಾನ.

ಇರಲಿ, 2009ರ ಹೊಸ್ತಿಲಲ್ಲಿ ನಿಂತಿರುವ ನಾವು 'ಬದುಕಿ, ಬದುಕಲು ಬಿಡಿ' ತತ್ವವನ್ನು ಹಾರೈಸಿಕೊಳ್ಳೋಣ.

ದ್ವೇಷ, ವಂಚನೆ ಜಾಗದಲ್ಲಿ ಪ್ರೀತಿ, ಸಹಬಾಳ್ವೆ ಮೊಳೆಯಲಿ, ಶಾಂತಿ, ಅಭ್ಯುದಯ, ಸಂತೋಷ ತುಂಬಿರಲಿ ಎನ್ನುತ್ತಾ ಈ ವರ್ಷಕ್ಕೆ ಅಡಿ ಇಡೋಣ.



ನಡೆ ಮನವೆ ಹೊಸವರುಷಕೆ
ಸಿಹಿ ನೆನಪ
ಬುತ್ತಿ ಜೊತೆಗೆ,
ಎಡವಿ ಬಿದ್ದ ಕ್ಷಣವ ಕೊಡವಿ,
ಅಡೆತಡೆಗಳ ಎಲ್ಲ ಕೆಡವಿ,
ಕಟ್ಟುವ ಸವಿ ಸುಂದರ
ಕನಸುಗಳ,
ಕಾಯುವ ನನಸಾಗುವ ಆ ಕ್ಷಣಗಳ
ಹೊಸ ವರ್ಷ
ತರಲಿ ಹರುಷ
ಪ್ರತಿ ನಿಮಿಷ.

Wednesday, July 23, 2008

ನಾನಿರುವುದೆ ನಿಮಗಾಗಿ :REMIX

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದು ನಾನು ಬಂದು
ನಿಮ್ಮೊಡನಿಂದು ನಾನು ಬಂದು
ಪೆಗ್ಗನ್ನು ಹಾಕುವುದ ಮರೆಯಲ್ಲ
ಬರವಸೆ ನಿಡುವೆನಿಂದು ನಾ ನಿಮ್ಮೊಡನೆ ಬರುವೆನು ಎಂದು
ಬರವಸೆ ನಿಡುವೆನಿಂದು ನಾ ನಿಮ್ಮೊಡನೆ ಬರುವೆನು ಎಂದು
ಬಾರಿನ ಅಣೆ ನಿಮ್ಮನ್ನು ಬಿಟ್ಟು ಪೆಗ್ಗನ್ನು ಹಾಕಲ್ಲ

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ಸಾವಿರ ಜನುಮದ ಪುಣ್ಯವೊ ಏನೊ ನಾವಿ ಬಾರಲ್ಲಿ ಕುಳಿತಿಹೆವು
ಸಾವಿರ ಜನುಮದ ಪುಣ್ಯವೊ ಏನೊ ನಾವಿ ಬಾರಲ್ಲಿ ಕುಳಿತಿಹೆವು
ತಪಸಿನ ಪಲವೊ ನನ್ನಯ ಪುಣ್ಯವೊ
ತಪಸಿನ ಪಲವೊ ನನ್ನಯ ಪುಣ್ಯವೊ
ನಿಮ್ಮೊಡನಿಂದು ಕುಳಿತಿರುವೆ
Tension ಬಡಿದೊಡಿಸುವ ಈ Mindಗೆ ರಿಲ್ಯಾಕ್ಸ್ ತರುವ
Tension ಬಡಿದೊಡಿಸುವ ಈ Mindಗೆ ರಿಲ್ಯಾಕ್ಸ್ ತರುವ
Mindಗೆ ರಿಲ್ಯಾಕ್ಸು ಕೂಲ್ ತರಲು ಪುಲ್ ಬಾಟ್ಲ್ನಾ ಎತ್ತುವೆ

ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ
ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ
ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ
ನಾನಿರುವುದೆ ನಿಮಗಾಗಿ

ದಯವಿಟ್ಟು ಯಾರು ತಪ್ಪು ತಿಳಿದುಕೊಳ್ಳ ಬೇಡಿ.
ಸುಮ್ನೆ ತಾಮಾಷೆಗೆ

Monday, July 7, 2008

ಐ.ಟಿ. ಸಮಸ್ಸೆಗಳಿಗೆ ಶೀಘ್ರ ಪರಿಹಾರ

ಎಲ್ಲಾ ತರಹದ ಐ.ಟಿ. ಸಮಸ್ಸೆಗಳ ಶೀಘ್ರ ಪರಿಹಾರಕ್ಕಾಗಿ ಅಪಾರ ಅನುಭವಿ ಪರಿಣಿತರಾದ ಡಾ|| ಐ.ಟಿ. ಬಾಬ ಅವರನ್ನು ಇಂದೆ ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಪಡೆಯಿರಿ.

ಖಾಯಂ ವಿಳಾಸ:
ಬಾಬ ಕ್ಲಿನಿಕ್(ಡಾ||ಐ.ಟಿ. ಬಾಬ)
(2 ವರ್ಷದ ಅನುಭವ)

Tuesday, July 1, 2008

ಎಲ್ಲಾರೀಗೂ ಓಂದು ಲೆಕ್ಕ ಆದರೆ ಕುಡುಕರಿಗೆ ಬೇರೆನೆ ಲೆಕ್ಕ

1 ಲೀಟರ್ = 1000 ಮಿ.ಲೀ
1/2 ಲೀಟರ್ = 500 ಮಿ.ಲೀ
1/4 ಲೀಟರ್ = 250 ಮಿ.ಲೀ

ಆದರೆ

1ಫುಲ್ = 720 ಮಿ.ಲೀ
1ಹಾಫ್ = 360 ಮಿ.ಲೀ
1ಕ್ವಾರ್ಟರ್ = 180 ಮಿ.ಲೀ

ನೋಡ್ರಿ
ಕುಡುಕರಿಗೆ ಎಲ್ಲಾರು ಮೋಸ ಮಾಡ್ತಾರೆ

ಸಾಗರ ನನ್ನನು ಕಂಡು, ಉಕ್ಕುವ ರೀತಿ


ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನನ್ನನು ಕಂಡ ಕ್ಷಣವೆ ಉಕ್ಕಿತು ಈ ರೀತಿ

Thursday, May 22, 2008

Friday, May 9, 2008

ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು

First Year - Excuse Me
Second Year -ನನ್ನ ಪ್ರೀತಿಯ ಹುಡುಗಿ
Third Year -ಜೊತೆ ಜೊತೆಯಲಿ
Exam ನಲ್ಲಿ - ಶರಪಂಜರ
Question Paper - ಅಪರಿಚಿತ
ಕಾಪಿ ಚೀಟಿ - ಆಪ್ತಮಿತ್ರ
ಡಿಬಾರ್ - ಆಕಸ್ಮಿಕ
ಫಲಿತಾಂಶ - ಶ್..
ಪಾಸ್ - ಖುಶಿ
ಫೇಲ್ - ಹುಚ್ಹ
Supplementary - ನಾ ನಿನ್ನ ಬಿಡಲಾರೆ

Thursday, May 8, 2008

software engineer ಮತ್ತು Project Manager ನ ಮಿಲನ

ಹೇ ಹೇ ಹೇ.. ಆಹಾಹ..

ತನನಾನ ತನನಾನ ತನನಾನನ

ನಿನ್ನಿಂದಲೇ ನಿನ್ನಿಂದಲೇ ತಲೆನೋವು ಶುರುವಾಗಿದೆ

ನಿನ್ನಿಂದಲೇ ನಿನ್ನಿಂದಲೇ ತಲೆ ಎರಡು ಹೋಳಾಗಿದೆ


ಈ ಎದೆಯಲ್ಲಿ ಕಹಿಯಾದ ಕೋಲಾಹಲ

ನನಗೆ ನಿನ್ನಿಂದ ಇ-ಮೇಲ್ ಬಂದಾಗಲೆ

ನಿನ್ನ ತುಟಿಯಲ್ಲಿ ಒಳ್ಳೆ ಪ್ರೊಗ್ರಾಮರ್ ಆಗುವ ಹಂಬಲ

ನನ್ನ career ಹಾಳಾಯ್ತು ನಿನ್ನಿಂದಲೇ


ನಿನ್ನಿಂದಲೇ ನಿನ್ನಿಂದಲೇ ತಲೆನೋವು ಶುರುವಾಗಿದೆ

ನಿನ್ನಿಂದಲೇ ನಿನ್ನಿಂದಲೇ ತಲೆ ಎರಡು ಹೋಳಾಗಿದೆ

ಇರುಳಲ್ಲಿ bug ಅಂತ ಕಾಡಿ ಈಗ

ಹಾಯಾಗಿ ನಿಂತಿರುವೆ ಸರಿಯೇನು ?

Appraisal time ನಲ್ಲಿ ಬೇಕಂತಲೇ ಏನೋ ಮಾಡಿ

Bug fix ಮಾಡು ಅನ್ನೋದು ಸರಿಯೇನು
ಈ ಬದುಕಿಗೆ ಈ Life ಗೆ
ಬೇರೆ Company ಯಿಂದ ಕರೆ ಬಂದಿದೆ

ನಿನ್ನಿಂದಲೇ ನಿನ್ನಿಂದಲೇ ತಲೆನೋವು ಶುರುವಾಗಿದೆ

ನಿನ್ನಿಂದಲೇ ನಿನ್ನಿಂದಲೇ ತಲೆ ಎರಡು ಹೋಳಾಗಿದೆ

ಜಗದೊಳಗೆ ಮೊದಲು ಜನಿಸಿದಳು ಹುಡುಕಿದರೆ ಮೂಲ ಸಿಗದಯ್ಯ

ಸವಿ ಸವಿ ನೆನಪು ಸಾವಿರ ನೆನಪು

ಸಾವಿರ ಕಾಲಕು ಸವೆಯದ ನೆನಪು

ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

ಎದೆಯಾಳದಲಿ ಬಚ್ಚಿಕೋಡಿರುವ ಅಚ್ಚಲಿಯದ ನೂರೊಂದು ನೆನಪು

ಏನೊ ಒಂದು ತೊರೆದ ಹಾಗೆ ..

ಯಾವುದೊ ಒಂದು ಪಡೆದ ಹಾಗೆ ..

ಅಮ್ಮನು ಮಡಿಲ ಅಪ್ಪಿದಹಾಗೆ ..

ಕಣ್ಣಂಚಲ್ಲೀ .... ನಮ್ಮ್ ಅಮ್ಮನ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು


ಮೊದಮೊದಲ್ ಪ್ರೀತಿ ನೀಡಿದವಳು ಅಮ್ಮ
ಮೊದಮೊದಲ್ ಮಾತನಾಡಿಸಿದವಳು ಅಮ್ಮ

ಮೊದಮೊದಲ್ ತೊದಲು ನುಡಿಯ ಕಲಿಸಿದವಳು ಅಮ್ಮ

ಮೊದಮೊದಲ್ ಮುತ್ತು ಕೊಟ್ಟವಳು ಅಮ್ಮ
ಮೊದಮೊದಲ್ ಕೈ ತುತ್ತು ಉಣಿಸಿದವಳು ಅಮ್ಮ

ಮೊದಮೊದಲ್ ಆಟ ಆಡಿಸಿದವಳು ಅಮ್ಮ

ಮೊದಮೊದಲ್ ಪಾಠ ಕಲಿಸಿದವಳು ಅಮ್ಮ

ಮೊದಮೊದಲ್ ನೋಟಕೆ ಕಂಡವಳು ಅಮ್ಮ
ಮೊದಮೊದಲ್ ಹೆಜ್ಜೆಯನಿಡುವುದ ಕಲಿಸಿದವಳು ಅಮ್ಮ
ಮೊದಮೊದಲ್ ಉಡಿಗೆ ತೊಡಿಸಿದಳು ಅಮ್ಮ
ಎಲ್ಲಾದಕ್ಕು ಮುನ್ನುಡಿ ಅವಳೆ ಅಮ್ಮ

Monday, May 5, 2008

ನಿಮದೆ ನೆನಪು ದಿನವು ಮನದಲ್ಲಿ

ದುಡಿದಿರಿ ನೀವು ಹಗಲಿರುಳು ನಮಗಾಗಿ
ಪಡೆದಿರಿ ಶ್ರಮ ನಮ್ಮ ಭವಿಷ್ಯಕ್ಕಾಗಿ

ನಮಗೇನು ಬೇಕೆಂದು ಹೇಳಲಿಲ್ಲ ನಾವು
ಕೇಳದೆಯೆ ಅದನೆಲ್ಲ ತಂದಿಟ್ಟಿರಿ ನೀವು

ಅದಕೇ ‘ತಂದೆ’ ನೀನು!

ನೀಡಿರುವೆ ನೀನು ಬಾಳನೆದುರಿಸುವ ಬಲವನ್ನು
ಗುರಿಯ ಸಾಧಿಸುವ ಛಲವನ್ನು

ವರುಷಗಳು ಬದಲಾದರು ಬದಲಾಗಲಿಲ್ಲ ನೀನು
ಹರುಷ ದುಃಖಗಳಲಿ ನಿನ್ನ ಮರೆಯುವೆನೆ ನಾನು

ನನ್ನಿಂದ ನೀ ದೂರದಲಿ ಇದ್ದರೂ
ಮನಸಿನಲಿ ಅನವರತ ತುಂಬಿರುವೆ ನೀನು

ನೀನಗೆನು ಬೇಕೆಂದು ಕೇಳುವಸ್ಟರಲ್ಲಿ ನಾವು
ನಮ್ಮಿಂದ ದೂರವಾಗಿ ಹೋಗಿಬಿಟ್ಟೆ ನೀನು

Wednesday, March 5, 2008

ಮಹಾ ಶಿವರಾತ್ರಿಯ ಹಾರ್ಧಿಕ ಶುಭಾಶಯಗಳು


ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು. ನಮ್ಮೆಲ್ಲರಿಗೂ ಆರೋಗ್ಯ, ನೆಮ್ಮದಿ ಮತ್ತು ಸುಖ ಆ ಕರುಣಾಮಯಿಯಾದ ಶಿವನು ಕೊಡಲೆಂದು ಪ್ರಾರ್ಥಿಸೋಣ.
ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ






Wednesday, February 27, 2008

ಮೋರಿ ಮಳೆ

ಅನಿಸುತಿದೆ ಯಾಕೊ ಇ೦ದು...

ನಿನ್ನಿ೦ದನೆ ಈ ವಾಸನೆ ಎ೦ದು...

ಯಾವುದೋ ಮೋರಿಯಲ್ಲಿ ನೀನು ಮಿಂದು ಬಂದವನೆಂದು...

ಅಯ್ಯೊ ಎ೦ತಾ ಕಚ್ಹಡ ವಾಸನೆ...

ಸ್ನಾನ ಮಾಡಿಕೊ೦ಡು ಬಾರೋ ಹಾಗೆ ಸುಮ್ಮನೆ...

ಬೀಸುವ ತಂಗಾಳಿಯು ತಂದಿದೆ ಕಚ್ಹಡ ವಾಸನೆ...

ನೀನು ಪಕ್ಕದಲ್ಲಿ ನಿಂತರೆ ಹೊಟ್ಟೆಯಲ್ಲಿ ಎನೋ ತಳಮಳ...

ತಿಂಗಳ ರಜೆಯ ಹಾಕಿದೆ ನಾನು ಕಂಪನೀಗೆ ನೀನು ಪಕ್ಕದಲ್ಲಿ ಕುಂತ ದಿನ...

ನಿನಗುಂಟೆ ಇದರ ಕಲ್ಫನೆ...

ಒಮ್ಮೆ ಆದರು soapನ use ಮಾಡು ಸ್ನಾನಕ ಹಾಗೆ ಸುಮ್ಮನೆ...

Thursday, February 14, 2008

ಹುಡುಗಿ ಬೇಕಾಗಿದ್ದಾಳೆ

ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೇಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಈ-ಮೇಲ್ !!

Wednesday, January 23, 2008

ನಮ್ಮ ದಾವಣಗೆರೆ

ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದು ಬಾಯಲ್ಲಿ ನೀರೂರಿಸುವ ಗರಿಗರಿಯಾದ ಬೆಣ್ಣೆ ದೋಸೆ, ಮಸಾಲೆ ಮಂಡಕ್ಕಿ ಮತ್ತು ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಿಗುವ ದಾವಣಗೆರೆ, ಬೆಂಗಳೂರಿನಿಂದ ಸುಮರು 260 ಕಿ.ಮಿ ದೂರವಿದೆ.

ದಾವಣಗೆರೆಯು ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗಗಳ ಎರಡು ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಶೈಲಿಗಳು ಸೇರಿ ದಾವಣೆಗೆರೆಗೆ ಒಂದು ವಿಶಿಷ್ಟ ಸ್ಥಾನ ನೀಡಿವೆ. ಇಲ್ಲಿ ವಿಶೇಷ ಏನಪ್ಪ ಅಂದರೆ ಹೋಟೆಲ್ಲುಗಳ ಜೊತೆ ವೀರಶೈವ ಖಾನಾವಳಿಗಳನ್ನೂ ಕಾಣಬಹುದು. ಇಲ್ಲಿ ರಾಗಿಮುದ್ದೆ ಊಟ, ಜೋಳದ ರೊಟ್ಟಿ ಊಟವನ್ನೂ ಆಸ್ವಾದಿಸಬಹುದು ದಕ್ಷಿಣ ಕರ್ನಾಟಕದ ಭಾಷಾ ಶೈಲಿಯೊಡನೆ ಉತ್ತರ ಕರ್ನಾಟಕದ ಭಾಷಾ ಶೈಲಿಯೂ ಸೇರಿಗೊಂಡು ದಾವಣಗೆರೆಯ ಜನರಾಡುವ ಕನ್ನಡ ವಿಶಿಷ್ಟವಾಗಿದೆ.

ಇಲ್ಲಿ 3 ಇಂಜಿನಿಯರಿಂಗ್ ಕಾಲೇಜುಗಳು, ಒಂದು ಮೆಡಿಕಲ್ ಮತ್ತು ಡೆಂಟಲ್ ಕಾಲೇಜು, ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಪ್ರಥಮ ದರ್ಜೆ ಕಾಲೇಜು, ಡಿಪ್ಲೊಮಾ ಕಾಲೇಜುಗಳು ಇವೆ. ನಗರದ ಬೆಳವಣಿಗೆಯಲ್ಲಿ ಈ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಬಹಳಷ್ಟಿದೆ. ಎಲ್ಲಿ ನೋಡಿದರೂ ಇಲ್ಲಿ ವಿದ್ಯಾರ್ಥಿಗಳು(ವಿದ್ಯಾರ್ಥಿನಿಯರೂ!) ಕಾಣ ಸಿಗುತ್ತಾರೆ. ವಿದ್ಯಾರ್ಥಿನಿಲಯಗಳಂತೂ ಇಲ್ಲಿ ಅನೇಕ ಇವೆ. ಹಿಂದೆ ದಾವಣಗೆರೆ ಪ್ರಸಿದ್ಧ ಕಾಟನ್ ಮಿಲ್ ಗಳಿಂದ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಜನಪ್ರಿಯವಾಗಿತ್ತು.

ದಾವಣಗೆರೆಯಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಮಂಡಕ್ಕಿ(ಕಡ್ಲೆಪುರಿ) ತಯಾರಕ ಘಟಕಗಳಿವೆ. ಇಲ್ಲಿ ತಯಾರಾಗುವ ಮಂಡಕ್ಕಿ ಉತ್ತಮಗುಣಮಟ್ಟದ್ದಾಗಿದ್ದು, ಕರ್ನಾಟಕದೆಲ್ಲಡೆ ಸರಬರಾಜಾಗುತ್ತದೆ. ದಾವಣಗೆರೆ ಮಂದಿಗೆ ಬಹಳ ಇಷ್ಟವಾದ ತಿಂಡಿ ಖಾರಾ ಮಂಡಕ್ಕಿ, ಜೊತೆಗೆ ಮೆಣಸಿನಕಾಯಿ ಬಜ್ಜಿ. ಮಂಡಕ್ಕಿಯಲ್ಲೂ ಮಸಾಲೆ ಮಂಡಕ್ಕಿ, ನರ್ಗೀಸ್ ಮಂಡಕ್ಕಿ ಎಂದು ವಿವಿಧ ಬಗೆ ಇವೆ. ದಾವಣಗೆರೆಯ ಮಸಾಲ ಮಂಡಕ್ಕಿ, ಮೆಣಸಿನ ಕಾಯಿ ಬಜ್ಜಿ ತಿಂದವರಿಗೆ ಗೊತ್ತು ಅದರ ರುಚಿ.
ಇನ್ನೊಂದು ಪ್ರಸಿದ್ಧ ಅಂದರೆ ಬೆಣ್ಣೆ ದೋಸೆ ಬಗ್ಗೆ ಮೈಸೂರಿಗೆ ಹೇಗೆ ಮೈಸೂರು ಪಾಕ್ ವಿಶೇಷವೋ, ಧಾರವಾಡಕ್ಕೆ ಪೇಡಾ ಹೇಗೆ ವಿಶೇಷವೋ ಹಾಗೇ ದಾವಣಗೆರೆ ಬೆಣ್ಣೆ ದೋಸೆ ಎಂದೇ ಖ್ಯಾತಿಪಡೆದಿರುವ ಈ ವಿಶಿಷ್ಟ ದೋಸೆ ದಾವಣಗೆರೆಗೆ ವಿಶೇಷವಾಗಿದೆ.

ದಾವಣಗೆರೆ ಅಪ್ಪಟ ಕನ್ನಡಿಗರಿರುವ ಗಂಡುಮೆಟ್ಟಿದ ಪ್ರದೇಶ.ಇಲ್ಲಿನ ಜನರ ಮಾತು ಸ್ವಲ್ಪ ಒರಟಾದರೂ ಬಹಳ ಹೃದಯವಂತರೂ, ಸೌಜನ್ಯಶೀಲರೂ ಆಗಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ತಿನ್ನಲು ಖಾರಾ ಮಂಡಕ್ಕಿ, ಜೊತೆಗೆ ಚಹಾ ಅಥವಾ ಕಾಫೀ ನೀಡಿ ಉಪಚರಿಸುವುದು ಇಲ್ಲಿನ ಸಂಪ್ರದಾಯ.

ಇವನೆನಪ್ಪ ತಿಂಡಿ ಪೊತ ಬರಿ ತಿನ್ನೊದರ ಬಗ್ಗೆ ಹೆಳ್ತನೆ ಅಂತ ಅಲ್ಲಿನ ಪ್ರೇಕ್ಷಣೀಯ ಸ್ತಳಗಳ ಬಗ್ಗೆ ಎನು ಹೆಳ್ತಿಲ್ಲ ಅಂತ ಅದು ಇದೆ.ಚಿತ್ರದುರ್ಗದ ಕೊಟೇ , ಚೆನ್ನಗಿರಿ ಬಳಿಯ ಶಾಂತಿಸಾಗರ(ಸೂಳೆಕೆರೆ) , ಕುಂದುವಾಡ ಕೆರೆ.

ದಾವಣಗೆರೆಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ಹೇಳಲು ಕಾರಣ,ಹುಟ್ಟಿ ಬೆಳಿದಿರು ಜಾಗ ಕಣ್ರಿ 22 ವರ್ಷದ ಅನುಭವ ಈಗ ತಾನೆ ಅಲೆಮಾರಿ ಜೀವನ ಶುರು ಮಾಡಿದ್ಹಿನಿ ಎಲ್ಲಿ ನೆಲೆ ನಿಲ್ತಿನೊ ಹೆಳಕ್ಕೆ ಆಗಲ್ಲಾ.

Monday, January 21, 2008

ಸೊಮಾರಿ

ಆತ ಸುಖವಾಗಿ ಮಲಗಿದ್ಹ ಚಂದ್ರನಡಿ
ಹಾಯಾಗಿ ನಿದ್ರಿಸಿದ್ಹ ಸೂರ್ಯನಡಿ
ಎಲ್ಲಾವನ್ನೂ ಮುಂದುಡುತ್ತಾ ಬಂದ ಜೀವನವಿಡಿ
ಒಂದು ದಿನ ಎನನ್ನು ಮಾಡದೆ ಮಡಿದ

ಎಲ್ಲಾ ಕೃಷ್ಣ ಲೀಲೆ

ದುರ್ಮನಸ್ಸಿನ ಪೂಜೆಗೆ ಓಲಿಯದೆ
ನಿಶ್ಕಲ್ಮಶವಾದ ನಿರ್ಮಲವಾದ ಭಕ್ತಿಗೆ ಓಲಿದು
ಕನಕದಾಸರ ಕಡೆಗೆ ತಿರುಗಿದ
ನಮ್ಮ ಉಡುಪಿ ಶ್ರಿ ಕೃಷ್ಣ

ಕರ್ನಾಟಕದ ರಾಜಕೀಯ ಸ್ತಿತಿಯನ್ನು ನೊಡಿ
ಕುರ್ಚಿಯ ಆಸೆಯಾಗಿ
ಮತ್ಹೇ ಮರಳಿ ಬರುವನೆನು ನಮ್ಮ ಎಸ್.ಎಂ.ಕೃಷ್ಣ

Friday, January 18, 2008

ಇರೋದ್ರೊಳ್ಗೆ ಒಮ್ಮೆ ನೋಡು ಹನುಮನ ಗು೦ಡಿ


ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕ೦ಡಿ
ಸಾಯೋತನಕ ಸ೦ಸಾರದೊಳಗೆ ಗ೦ಡಾಗು೦ಡಿ
ಹೇರಿಕೊ೦ಡು ಹೋಗೋದಿಲ್ಲ ಸತ್ತಾಗ್ ಬ೦ಡಿ
ಇರೋದ್ರೊಳ್ಗೆ ಒಮ್ಮೆ ನೋಡು ಹನುಮನ ಗು೦ಡಿ

Friday, January 11, 2008

ಸಂಕ್ರಾಂತಿ, ಬಂತು ಸಂಕ್ರಾಂತಿ!


ಎಳ್ಳು ಬೀರುತ್ತಾ... ಸಿಹಿಯ ಸವಿಯುತ್ತಾ... ಕಬ್ಬು, ಅವರೆ, ಕಡಲೆಕಾಯಿಯನ್ನು ಮೆಲ್ಲುತ್ತಾ ಸಂಭ್ರಮಿಸುವ ಹಬ್ಬ ಸಂಕ್ರಾಂತಿ. ಮನುಷ್ಯ ಸಂಬಂಧಗಳನ್ನು ಬಿಗಿಗೊಳಿಸುವ ಹಬ್ಬ ಸಂಕ್ರಾಂತಿ. ಸಂಭ್ರಮ ಮತ್ತು ಸಡಗರದ ಸಂಕ್ರಾಂತಿಗೆ ಹೀಗೊಂದು ಮುನ್ನುಡಿ.
ಹಸುಕರುಗಳ ಕೊರಳಿನ ಗಂಟೆಯ ಢಣಢಣ ಸದ್ದು, ಮನೆಯಲ್ಲಿ ಹೆಂಡತಿ(ಇದ್ಹರೆ) ಕಾಲಿನ ಗೆಜ್ಜೆಯ ಘಲ್ ಘಲ್ ಧ್ವನಿ, ಅಮ್ಮನ ರೇಷ್ಮೆ ಸೀರೆಯ ಸರಪರ ಸದ್ದು, ಕೈಬಳೆಗಳ ಶಬ್ದ, ಮಕ್ಕಳ ಕೇಕೆ ನಗು, ಅಂಗಳದಲ್ಲಿ ರಂಗವಲ್ಲಿಯ ಚಿತ್ತಾರ, ಮಾವಿನ ತಳಿರು ತೋರಣಗಳ ಅಲಂಕಾರ, ಮನೆಯಾಡೆಯನ ಮುಖದಲ್ಲಿ ಮಂದಹಾಸ, ಅಂಗಡಿಗಳಲ್ಲಿ ಗ್ರೀಟಿಂಗ್ ಕಾರ್ಡ್ ಕೊಳ್ಳುವ ಭರಾಟೆ, ಮಾರ್ಕೆಟ ‌ಗಳಲ್ಲಿ ಕಬ್ಬಿನ ಜಲ್ಲೆ, ಹೂವು ಹಣ್ಣು, ಎಲೆಅಡಿಕೆ, ಕಡಲೇಬೀಜಗಳ ಕಮ್ಮಿ ಬೆಲೆಗಳಿಗಾಗಿ ಹುಡುಕಾಟ ಎಲ್ಲಾ ಖರೀದಿಗಳ ನಂತರ ಹೊತ್ತೊಯ್ಯುವ ಪರದಾಟ ನಿಮಗೂ ಏನೂಂತ ಗೊತ್ತಾಗಿರಬೇಕಲ್ಲ ಇದು ಮಕರ ಸಂಕ್ರಾತಿಯ ರಸದೂಟ.

ನೇಸರನು ತನ್ನ ಪಥವ ಬದಲಿಸುತಿರಲು
ಮಾಗಿಯ ಛಳಿ ಮಾಯವಾಗುತಿರಲು
ಹೊಸ ಚೈತನ್ಯ ಲವಲವಿಕೆ ಮನದಲ್ಲಿ ಮೂಡುತಿರಲು
ಹೊಸ ಬೆಳೆಯ ಹಸನದಾ ದವಸವು ಹೊಲೆಯ ಮೆಲೆರುತಿರಲು
ಸಂಕ್ರಾಂತಿ ಹಬ್ಬವು ಮನೆಯೊಳಗೆ ಕಾಲಿಡುತಿದೆ
ಬನ್ನಿ ನಾವೆಲ್ಲರು ಕೂಡಿ ಅದನ್ನು ಸ್ವಾಗತಿಸೂಣ
ಸಂಕ್ರಾಂತಿ ಹಬ್ಬದ ಹಾರ್ತಿಕ ಶುಭಾಶಯಾಗಳು