Friday, January 11, 2008

ಸಂಕ್ರಾಂತಿ, ಬಂತು ಸಂಕ್ರಾಂತಿ!


ಎಳ್ಳು ಬೀರುತ್ತಾ... ಸಿಹಿಯ ಸವಿಯುತ್ತಾ... ಕಬ್ಬು, ಅವರೆ, ಕಡಲೆಕಾಯಿಯನ್ನು ಮೆಲ್ಲುತ್ತಾ ಸಂಭ್ರಮಿಸುವ ಹಬ್ಬ ಸಂಕ್ರಾಂತಿ. ಮನುಷ್ಯ ಸಂಬಂಧಗಳನ್ನು ಬಿಗಿಗೊಳಿಸುವ ಹಬ್ಬ ಸಂಕ್ರಾಂತಿ. ಸಂಭ್ರಮ ಮತ್ತು ಸಡಗರದ ಸಂಕ್ರಾಂತಿಗೆ ಹೀಗೊಂದು ಮುನ್ನುಡಿ.
ಹಸುಕರುಗಳ ಕೊರಳಿನ ಗಂಟೆಯ ಢಣಢಣ ಸದ್ದು, ಮನೆಯಲ್ಲಿ ಹೆಂಡತಿ(ಇದ್ಹರೆ) ಕಾಲಿನ ಗೆಜ್ಜೆಯ ಘಲ್ ಘಲ್ ಧ್ವನಿ, ಅಮ್ಮನ ರೇಷ್ಮೆ ಸೀರೆಯ ಸರಪರ ಸದ್ದು, ಕೈಬಳೆಗಳ ಶಬ್ದ, ಮಕ್ಕಳ ಕೇಕೆ ನಗು, ಅಂಗಳದಲ್ಲಿ ರಂಗವಲ್ಲಿಯ ಚಿತ್ತಾರ, ಮಾವಿನ ತಳಿರು ತೋರಣಗಳ ಅಲಂಕಾರ, ಮನೆಯಾಡೆಯನ ಮುಖದಲ್ಲಿ ಮಂದಹಾಸ, ಅಂಗಡಿಗಳಲ್ಲಿ ಗ್ರೀಟಿಂಗ್ ಕಾರ್ಡ್ ಕೊಳ್ಳುವ ಭರಾಟೆ, ಮಾರ್ಕೆಟ ‌ಗಳಲ್ಲಿ ಕಬ್ಬಿನ ಜಲ್ಲೆ, ಹೂವು ಹಣ್ಣು, ಎಲೆಅಡಿಕೆ, ಕಡಲೇಬೀಜಗಳ ಕಮ್ಮಿ ಬೆಲೆಗಳಿಗಾಗಿ ಹುಡುಕಾಟ ಎಲ್ಲಾ ಖರೀದಿಗಳ ನಂತರ ಹೊತ್ತೊಯ್ಯುವ ಪರದಾಟ ನಿಮಗೂ ಏನೂಂತ ಗೊತ್ತಾಗಿರಬೇಕಲ್ಲ ಇದು ಮಕರ ಸಂಕ್ರಾತಿಯ ರಸದೂಟ.

ನೇಸರನು ತನ್ನ ಪಥವ ಬದಲಿಸುತಿರಲು
ಮಾಗಿಯ ಛಳಿ ಮಾಯವಾಗುತಿರಲು
ಹೊಸ ಚೈತನ್ಯ ಲವಲವಿಕೆ ಮನದಲ್ಲಿ ಮೂಡುತಿರಲು
ಹೊಸ ಬೆಳೆಯ ಹಸನದಾ ದವಸವು ಹೊಲೆಯ ಮೆಲೆರುತಿರಲು
ಸಂಕ್ರಾಂತಿ ಹಬ್ಬವು ಮನೆಯೊಳಗೆ ಕಾಲಿಡುತಿದೆ
ಬನ್ನಿ ನಾವೆಲ್ಲರು ಕೂಡಿ ಅದನ್ನು ಸ್ವಾಗತಿಸೂಣ
ಸಂಕ್ರಾಂತಿ ಹಬ್ಬದ ಹಾರ್ತಿಕ ಶುಭಾಶಯಾಗಳು

No comments: