Wednesday, January 23, 2008

ನಮ್ಮ ದಾವಣಗೆರೆ

ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದು ಬಾಯಲ್ಲಿ ನೀರೂರಿಸುವ ಗರಿಗರಿಯಾದ ಬೆಣ್ಣೆ ದೋಸೆ, ಮಸಾಲೆ ಮಂಡಕ್ಕಿ ಮತ್ತು ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಿಗುವ ದಾವಣಗೆರೆ, ಬೆಂಗಳೂರಿನಿಂದ ಸುಮರು 260 ಕಿ.ಮಿ ದೂರವಿದೆ.

ದಾವಣಗೆರೆಯು ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗಗಳ ಎರಡು ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಶೈಲಿಗಳು ಸೇರಿ ದಾವಣೆಗೆರೆಗೆ ಒಂದು ವಿಶಿಷ್ಟ ಸ್ಥಾನ ನೀಡಿವೆ. ಇಲ್ಲಿ ವಿಶೇಷ ಏನಪ್ಪ ಅಂದರೆ ಹೋಟೆಲ್ಲುಗಳ ಜೊತೆ ವೀರಶೈವ ಖಾನಾವಳಿಗಳನ್ನೂ ಕಾಣಬಹುದು. ಇಲ್ಲಿ ರಾಗಿಮುದ್ದೆ ಊಟ, ಜೋಳದ ರೊಟ್ಟಿ ಊಟವನ್ನೂ ಆಸ್ವಾದಿಸಬಹುದು ದಕ್ಷಿಣ ಕರ್ನಾಟಕದ ಭಾಷಾ ಶೈಲಿಯೊಡನೆ ಉತ್ತರ ಕರ್ನಾಟಕದ ಭಾಷಾ ಶೈಲಿಯೂ ಸೇರಿಗೊಂಡು ದಾವಣಗೆರೆಯ ಜನರಾಡುವ ಕನ್ನಡ ವಿಶಿಷ್ಟವಾಗಿದೆ.

ಇಲ್ಲಿ 3 ಇಂಜಿನಿಯರಿಂಗ್ ಕಾಲೇಜುಗಳು, ಒಂದು ಮೆಡಿಕಲ್ ಮತ್ತು ಡೆಂಟಲ್ ಕಾಲೇಜು, ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಪ್ರಥಮ ದರ್ಜೆ ಕಾಲೇಜು, ಡಿಪ್ಲೊಮಾ ಕಾಲೇಜುಗಳು ಇವೆ. ನಗರದ ಬೆಳವಣಿಗೆಯಲ್ಲಿ ಈ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಬಹಳಷ್ಟಿದೆ. ಎಲ್ಲಿ ನೋಡಿದರೂ ಇಲ್ಲಿ ವಿದ್ಯಾರ್ಥಿಗಳು(ವಿದ್ಯಾರ್ಥಿನಿಯರೂ!) ಕಾಣ ಸಿಗುತ್ತಾರೆ. ವಿದ್ಯಾರ್ಥಿನಿಲಯಗಳಂತೂ ಇಲ್ಲಿ ಅನೇಕ ಇವೆ. ಹಿಂದೆ ದಾವಣಗೆರೆ ಪ್ರಸಿದ್ಧ ಕಾಟನ್ ಮಿಲ್ ಗಳಿಂದ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಜನಪ್ರಿಯವಾಗಿತ್ತು.

ದಾವಣಗೆರೆಯಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಮಂಡಕ್ಕಿ(ಕಡ್ಲೆಪುರಿ) ತಯಾರಕ ಘಟಕಗಳಿವೆ. ಇಲ್ಲಿ ತಯಾರಾಗುವ ಮಂಡಕ್ಕಿ ಉತ್ತಮಗುಣಮಟ್ಟದ್ದಾಗಿದ್ದು, ಕರ್ನಾಟಕದೆಲ್ಲಡೆ ಸರಬರಾಜಾಗುತ್ತದೆ. ದಾವಣಗೆರೆ ಮಂದಿಗೆ ಬಹಳ ಇಷ್ಟವಾದ ತಿಂಡಿ ಖಾರಾ ಮಂಡಕ್ಕಿ, ಜೊತೆಗೆ ಮೆಣಸಿನಕಾಯಿ ಬಜ್ಜಿ. ಮಂಡಕ್ಕಿಯಲ್ಲೂ ಮಸಾಲೆ ಮಂಡಕ್ಕಿ, ನರ್ಗೀಸ್ ಮಂಡಕ್ಕಿ ಎಂದು ವಿವಿಧ ಬಗೆ ಇವೆ. ದಾವಣಗೆರೆಯ ಮಸಾಲ ಮಂಡಕ್ಕಿ, ಮೆಣಸಿನ ಕಾಯಿ ಬಜ್ಜಿ ತಿಂದವರಿಗೆ ಗೊತ್ತು ಅದರ ರುಚಿ.
ಇನ್ನೊಂದು ಪ್ರಸಿದ್ಧ ಅಂದರೆ ಬೆಣ್ಣೆ ದೋಸೆ ಬಗ್ಗೆ ಮೈಸೂರಿಗೆ ಹೇಗೆ ಮೈಸೂರು ಪಾಕ್ ವಿಶೇಷವೋ, ಧಾರವಾಡಕ್ಕೆ ಪೇಡಾ ಹೇಗೆ ವಿಶೇಷವೋ ಹಾಗೇ ದಾವಣಗೆರೆ ಬೆಣ್ಣೆ ದೋಸೆ ಎಂದೇ ಖ್ಯಾತಿಪಡೆದಿರುವ ಈ ವಿಶಿಷ್ಟ ದೋಸೆ ದಾವಣಗೆರೆಗೆ ವಿಶೇಷವಾಗಿದೆ.

ದಾವಣಗೆರೆ ಅಪ್ಪಟ ಕನ್ನಡಿಗರಿರುವ ಗಂಡುಮೆಟ್ಟಿದ ಪ್ರದೇಶ.ಇಲ್ಲಿನ ಜನರ ಮಾತು ಸ್ವಲ್ಪ ಒರಟಾದರೂ ಬಹಳ ಹೃದಯವಂತರೂ, ಸೌಜನ್ಯಶೀಲರೂ ಆಗಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ತಿನ್ನಲು ಖಾರಾ ಮಂಡಕ್ಕಿ, ಜೊತೆಗೆ ಚಹಾ ಅಥವಾ ಕಾಫೀ ನೀಡಿ ಉಪಚರಿಸುವುದು ಇಲ್ಲಿನ ಸಂಪ್ರದಾಯ.

ಇವನೆನಪ್ಪ ತಿಂಡಿ ಪೊತ ಬರಿ ತಿನ್ನೊದರ ಬಗ್ಗೆ ಹೆಳ್ತನೆ ಅಂತ ಅಲ್ಲಿನ ಪ್ರೇಕ್ಷಣೀಯ ಸ್ತಳಗಳ ಬಗ್ಗೆ ಎನು ಹೆಳ್ತಿಲ್ಲ ಅಂತ ಅದು ಇದೆ.ಚಿತ್ರದುರ್ಗದ ಕೊಟೇ , ಚೆನ್ನಗಿರಿ ಬಳಿಯ ಶಾಂತಿಸಾಗರ(ಸೂಳೆಕೆರೆ) , ಕುಂದುವಾಡ ಕೆರೆ.

ದಾವಣಗೆರೆಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ಹೇಳಲು ಕಾರಣ,ಹುಟ್ಟಿ ಬೆಳಿದಿರು ಜಾಗ ಕಣ್ರಿ 22 ವರ್ಷದ ಅನುಭವ ಈಗ ತಾನೆ ಅಲೆಮಾರಿ ಜೀವನ ಶುರು ಮಾಡಿದ್ಹಿನಿ ಎಲ್ಲಿ ನೆಲೆ ನಿಲ್ತಿನೊ ಹೆಳಕ್ಕೆ ಆಗಲ್ಲಾ.

No comments: