Sunday, June 27, 2010

ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಜಾತಕ ಇಲ್ಲದೆ ಇರುವುದು ಅದುವೆ - ಪ್ರೀತಿ

ಆರು ತಿಂಗಳ ಹಿಂದೆ...........

ಇತ್ತಿಚಿನ ದಿನಗಳಲ್ಲಿ ಅಮ್ಮನಿಗೆ ಪೋನ್ ಮಾಡಿದಾಗ ಮಾತಾಡ್ತಾ ಮಾತಾಡ್ತ ಏನಮ್ಮ ತಿಂಡಿ ಅಂದರೆ ನಿಮ್ಮ ಮಾವ ಊರಿಂದ ಹಸಿ ಅವರೆ ತಂದಿದ್ದ ಅವರೆಕಾಳು ಉಪ್ಪಿಟ್ಟು ಮಾಡಿದಿನೋ ಅಂತಿದ್ದಳು.ಯಾಕೆಂದರೆ ಆಗ ಅವರೆಕಾಳು season ಅಲ್ವ ಅದಕ್ಕೆ.ನೋಡಮ್ಮ ನಾನು ಬರೋ ವಾರ ಮೂರು ದಿವಸ ರಜೇ ಇದೆ ಊರಿಗೆ ಬರ್ತಿನಿ ಅವರೆಕಾಳು ಉಪ್ಪಿಟ್ಟು ಮಾಡಿಕೋಡಬೇಕು ಅಂತ ಹೇಳಿದೆ. ಆ ಮಾತಿನಂತೆ ಅಮ್ಮ ಮೊನ್ನೆ ಕ್ರೀಸ್ ಮಸ್ ರಜೆಗೆ ಮನೆಗೆ ಹೋದಾಗ ಅವರೆಕಾಳು ಉಪ್ಪಿಟ್ಟು ಮಾಡಿಕೊಟ್ಟಳು. ಅಮ್ಮ ಮಾಡಿದ ಬಿಸಿಬಿಸಿ ಅವರೆಕಾಳು ಉಪ್ಪಿಟ್ಟುನ ಚಟ್ನಿ ಪುಡಿಗಳನ್ನ ಹಾಕಿಕೊಂಡು ಒಳ್ಳೆ ಭಕಾಸುರನ ಹಾಗೆ ತಿಂದು ಕೈ ತೊಳೆದುಕೊಂಡು ಕಾಫಿ ಪೇಯವನ್ನು ಹಿರುತ್ತ ಕುಳಿತೆ.ಈ ಬಾರಿ ಊರಿನಿಂದ ನನ್ನ ದೊಡ್ಡಪ್ಪನು ಮನೆಗೆ ಬಂದಿದ್ದರು ಹಾಗೆ ಕಾಫಿ ಕುಡಿತ ಕುಡಿತ ದೊಡ್ಡಪ್ಪ ಮತ್ತು ಅಮ್ಮನ ಜೊತೆ ಮಾತಡ್ತ ಕುಳಿತೆ.

ಅಮ್ಮ ಮಾತಿನ ಮದ್ಯೆ ನನ್ನ ದೊಡ್ಡಪ್ಪನ ಹತ್ತಿರ ನನ್ನ ಮದುವೆ ವಿಷಯ ಮಾತಡಿದಳು. ಮಾವ ಈ ವರ್ಷ ಇವನ ಮದುವೆ ಮಾಡಬೇಕು ಅಂತ ಅಂದಳು. ಊನವ್ವ ಈ ವರ್ಷ ಬಿತ್ತ ಸುಗ್ಗಿ ಮುಗಿಲಿ ಹೆಣ್ಣು ನೋಡಿ ವಾಲಾಗ ಊದಿಸಿಬಿಡೋಣ ಅಂದ ನನ್ನ ದೊಡ್ಡಪ್ಪ.ಸುಮ್ನೆ ಕುಂತಿಯಲ್ಲೊ ಏನಾದರು ಮಾತಾಡು ಅಂದ್ರು ನಿನ್ನ ವಯಸ್ನಾಗೆ ನನಗೆ ಇಬ್ಬರು ಮಕ್ಕಳು ಇದ್ರು ಕಣ್ಲ ಅಂದ್ರು. ಹೌದು ದೊಡ್ಡಪ್ಪ ಮದುವೆ ಆದ್ರೆ ಅಲ್ವ ಮುಂದೆ ಮಕ್ಕಳು ಎಲ್ಲಾ ಹಾಗೆ ಹೇಗೆ ಹಾಗ್ತವೆ ಹೇಳ್ರಿ ಅಂತ ನನ್ನ ದೊಡ್ಡಪ್ಪನ ಹತ್ತಿರ ತಮಾಷೆ ಮಾಡಿದೆ. ದೊಡ್ಡವರ ಹತ್ತಿರ ಹೇಗೆ ಮಾತಡಬೇಕು ಅಂತನು ಗೊತ್ತಿಲ್ಲ ಅಂತ ಅಮ್ಮ ಬೈದಳು ಸುಮ್ನೆ ಕುಳಿತೆ.

ಕನ್ಯಾ ನೋಡ್ತಿವಿ ಮದುವೆ ಆಗಿ ಬೀಡು ಅಂದರು. ದೊಡ್ಡವರು ಹೇಳಿದ ತಕ್ಷಣ ಒಪ್ಪಿಕೊಂಡರೆ ಎಲ್ಲಿ ಹುಡುಗ ಬಾರಿ fast ಇದಾನೋ ಅಂತ ತಿಳಿಕೊಂಡುಬಿಡ್ತಾರೋ ಅಂತ ಸುಮ್ನೆ ಮಾತಿಗೆ ಇರಲಿ ಅಂತ ಇಷ್ಟು ಬೇಗಾನ ಯಾಕಮ್ಮ ಇನ್ನೊಂದೆರಡು ವರ್ಷ ಬಿಟ್ಟು ಹಾಗ್ತಿನಿ ಅಂತ ಅಂದೆ. ಹಾಗೆ ಭಯನು ಆಯ್ತು ಮದುವೆ ಆಗೋಕೆ ಅಲ್ಲಾ ಎಲ್ಲಿ ನಾನು ಹೇಳಿರೊ ಮಾತನ್ನ ಸೀರಿಯಸ್ ಆಗಿ ತಗೋಂಡು ಇನ್ನು ಎರಡು ವರ್ಷ ಮದುವೆ ವಿಷಯ ತಗೆಯದೆ ಇರ್ತಾರೊ ಅಂತ.

ಅದಕ್ಕೆ ಅಮ್ಮ ನೀನೆನು ಚಿಕ್ಕ ಹುಡುಗ ಏನೋ ನಿನ್ನ Friendsಗಳು ಎಲ್ಲಾ ಮದುವೆ ಆಗ್ತಾ ಇಲ್ವ ನೀನು ಆಗೋ ಅಂದ್ರು.ಹಾಗದ್ರೆ ಅವರು ಎಲ್ಲಾ ಲವ್ ಮಾಡಿ ಮದುವೆ ಹಾಗ್ತ ಇದ್ದಾರೆ ನಾನು ಯಾವುದಾದಾರು ಹುಡುಗಿನ ಲವ್ ಮಾಡಿ ಕರೆದುಕೊಂಡು ಬಂದು ನಿನ್ನ ಮುಂದೆ ನಿಲ್ಲಿಸಿ ಅಮ್ಮ ಇವಳೆ ನಿನ್ನ ಸೊಸೆ ನಮಗೆ ಮದುವೆ ಮಾಡು ಅಂದ್ರೆ ಮಾಡಿಸ್ತೀಯ ಅಂದೆ. ನೋಡು ನಾವು ತಮಾಷೆ ಮಾಡ್ತ ಇಲ್ಲ ಅಂದು ಅಮ್ಮ ಸ್ವಲ್ಪ ಸೀರಿಯಸ್ ಆದಳು. ನನಗೊ ಮನೆ ಕೆಲಸ ಮಾಡಿ ಮಾಡಿ ಸಾಕಾಗಿ ಹೋಗೈತಿ ಮನೆಗೆ ಸೊಸೆ ಮಂದರೆ ಅವಳು ಸ್ವಲ್ಪ ಮನೆ ಜವಾಬ್ದಾರಿ ತಗೋಳ್ತಾಳೆ ಅಂದಳು.

ಮನೆ ಕೆಲಸ ಮಾಡೋಕೆ ಸೊಸೆನೆ ಬೇಕಾ ಮನೆ ಕೆಲಸದವಳನ್ನ ಇಟ್ಟುಕೊಂಡರೆ ಆಯ್ತು ಬಿಡಮ್ಮ ಅಂದೆ. ಬಟ್ಟೆ wash ಮಾಡೋಕೆ ಅಂತ washing machine ಇದೆ, ಇನ್ನು ...... ಕೆಲಸಕ್ಕೆ ...... ಇದವೆ ಅದಕ್ಕೆ ಮದುವೆನೆ ಆಗಬೇಕ ಅಂತ ತಮಾಷೆ ಮಾಡಿದೆ.

ಮತ್ತು ತಮಾಷೆ ನೋಡು ನಿಂದು ಎಂತ ಹುಡುಗಿ ಬೇಕು ಹೇಳು? ಹುಡುಕ್ತಿವಿ ಅಂದ್ರು. ನಾನು ಓಂದು ಕ್ಷಣ ಏನನ್ನು ಮಾತನಾಡದೆ ಸುಮ್ನೆ ಕೂತಿದ್ದೆ.

ನನ್ನ ಅಮ್ಮನಿಗೆ ಮನಸ್ಸಿನಲ್ಲೆ ಸಂಶಯ ಇತ್ತು ಅನಿಸುತ್ತೆ ಕೊನೆಗೂ ತಡಿಲಾರದೆ ಕೇಳಿಬಿಟ್ಟಳು ನೀನು ಯಾರನ್ನಾದರು ಹುಡುಗಿನ ಇಷ್ಟ ಪಟ್ಟಿದಿಯೇನೋ ಅಂತ ಕೇಳಿದಳು.
ನಿನಗೆ ಯಾಕಮ್ಮ ಇಂತ ಡೌಟ್ ಬಂತು ಅಮ್ಮ ನಾನು ನಿನ್ನ ಮಗ ನನ್ನ ಮೇಲೆ ನಿನಗೆ ನಂಬಿಕೆ ಇಲ್ವಾ ಅಂದೆ. ಅದಕ್ಕೆ ಅಮ್ಮ ನಿನ್ನ ಮೇಲೆ ನನಗೆ ನಂಬಿಕೆ ಇದೆ ಕಣೋ ಆದ್ರೆ ಈ ನಿನ್ನ ವಯಸ್ಸಿನ ಮೇಲೆ ನನಗೆ ನಂಬಿಕೆ ಇಲ್ಲಾ ಅದಕ್ಕೆ ಅಂದ್ರು.ಕೋನೆಗೆ ಅಮ್ಮ ನೋಡು ನೀನು ಬೇಕಾದರೆ ಪ್ರೀತಿ ಮಾಡಿಬಿಟ್ಟೆ ಮದುವೆ ಆಗಪ್ಪಾ ನಾನು ಬೇಡ ಅನ್ನೊಲ್ಲ ಆದರೆ ನೀನು ಪ್ರೀತಿಸೊ ಹುಡುಗಿ ಇದಳಲ್ಲ ಅವಳು ಮಾತ್ರ ನಮ್ಮ ಜಾತಿಯವಳೆ ಆಗಿರಬೇಕು ಅಂದ್ರು. ನನಗೆ ಆ ಮಾತು ಕೇಳಿ ನುಂಗಲಾರದೆನೆ ಬಿಸಿ ತುಪ್ಪನ ಬಾಯಿಯಲ್ಲಿ ಇಟ್ಟು ಕೊಂಡ ಹಾಗೆ ಹಾಯ್ತು. ಒಂದೆ ಸಲ green signal ಕೊಟ್ಟು red signal ಹಾಕಿದ ಹಾಗೆ ಆಯ್ತು.

ಆಮೇಲೆ ನನ್ನ Youth dialogues start ಆಯ್ತು. ನೋಡಮ್ಮ LOVE IS BLIND ಪ್ರೀತಿ ಕುರುಡು ಕಣಮ್ಮ. ಈ ಪ್ರೀತಿ ಆನ್ನೊದು ಒಂದು ಆಕರ್ಷಣೆ. ಅದು ಹುಟ್ಟಬೇಕಾದ್ರೆ ಯಾರಿಗೂ ಹೇಳಿ ಕೇಳಿ ಹುಟ್ಟಲ್ಲ ಹುಟ್ಟಕ್ಕೆ ಯಾರ ಅಪ್ಪಣೆನು ಬೇಕಿಲ್ಲ ಅಮ್ಮ. ಈ ಭೂಮಿ ಮೇಲೆ ಹುಟ್ಟಿದ ಮೇಲೂ ಅದು ಯಾವ ಜಾತಿ ಅಂತ ಹೇಳೊಕೆ ಆಗದೆ ಇರುವಂತಹದು ಅಂದರೆ ಅದು ಪ್ರೀತಿ. ಅದು ಯಾವ ಜಾತಿ ಮತ ಅಂತ ನೋಡಿ ಹುಟ್ಟಲ್ಲ."ನಮ್ಮ ಮೇಲೆ ಕರುಣೆನೆ ಇಲ್ಲದೆ ಇರೋ ಸಾವು ಕೋಡ ಕೆಲವೂಂದು ಸಲ ನಮಗೆ ಸುಳಿವು ನೀಡಿ ನಮ್ಮ ಹತ್ತಿರ ಸುಳಿಯುತ್ತೆ ಆದರೆ ಈ ಪ್ರೀತಿ ಇದೆಯಲ್ಲಾ ಅದು ಎದೆಯ ಬಾಗಿಲನ್ನು ತಟ್ಟದೆ ತಿಳಿದು ತಿಳಿಯದನೆ ನಮ್ಮ ಮನಸ್ಸಿನಲ್ಲಿ ಬಂದು ಸೇರಿಕೊಂಡುಬಿಡುತ್ತೆ."

ಹೋಗ್ಲಿ ಬಿಡಮ್ಮ ನಾನು ಆ ಸಾಹಸಕ್ಕೆ ಕೈ ಹಾಕೊಕ್ಕೆ ಹೋಗಿಲ್ಲಾ. ಆ ವಿಷಯದಲ್ಲಿ ನಿನ್ನ ಮಗನಿಗೆ ಧೈರ್ಯನು ಕಮ್ಮಿನೆ ಅಂತ ಅಂದು ಮಾತು ಮುಗಿಸಿ ನನ್ನ ದೊಡ್ಡಪ್ಪನ ಬಸ್ ಸ್ಟಾಂಡ್ಗೆ ಬೀಡೊಕೆ ಅಂತ ಬೈಕ್ ಹೇರಿ ಹೊರಟೆ.

Saturday, February 20, 2010

ಬಾಲ್ಯದ ಆ ದಿನಗಳು

ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ನಡೆದಂತಹ ಓಂದು ಘಟನೆ.ಬೇರೆಯವರಿಗೆ ಇದು ಓಂದು ಹಾಸ್ಯಮಯ ಘಟನೆಯಾಗಿ ಕಾಣಬಹುದು ಆದರೆ ನನಗೆ ಇದು ಎಂದು ಮರೆಯಲಾಗದಂತಹ ಘಟನೆ ಯಾಕೆಂದರೆ ಆನುಭವಿಸಿದವನು ನಾನೆ ಆಲ್ವ ಅದಕ್ಕೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ಓದುವಾಗ ಮಕ್ಕಳು ಶಾಲೆ ಘಂಟೆ ಬಾರಿಸುವುದಕ್ಕಿಂತ ಅರ್ದ ಘಂಟೆ ಓಂದು ಘಂಟೆ ಮುಂಚಿತವಾಗಿ ಶಾಲೆಗೆ ಬಂದು ಓದಿಕೊಳ್ಳುತ್ತಿದ್ದರು ಅಂತಿರಾ ಇಲ್ಲ ಶಾಲಾ ಮೈದಾನದಲ್ಲಿ ಲಗೋರಿ, ಕ್ರೀಕೆಟು,HandBall ಹೀಗೆ ಹಲವು ಆಟಗಳನ್ನ ಆಡುವುದುಂಟು.ಆದರೆ ನಾನು ಓದುತ್ತಿದ್ದ ಶಾಲೆಯಲ್ಲಿ ಈ ತರಹ ಶಾಲಾ ಘಂಟೆ ಬಾರಿಸುವುದಕ್ಕಿಂತ ಮೊದಲೆ ಬಂದು ಶಾಲಾ ಮೈದಾನದಲ್ಲಿ ಆಟ ಆಡುವುದನ್ನ ನಿಷೆದಗೋಳಿಸಲಾಗಿತ್ತು. ಯಾಕೆಂದರೆ ಆ ಸಮಯದಲ್ಲಿ ಯಾರು ಹೇಳೊರು ಕೇಳೊರು ಇಲ್ಲದೆ ಇರುವುದರಿಂದ ಕೆಲವು ಅವಘಡಗಳು ಸಂಭವಿಸಿದ್ದವು ಅದಕ್ಕೆ.ಆದರು ಕೆಲವು ಹುಡುಗರು ಆಡೋದನ್ನ ನಿಲ್ಲಿಸುತ್ತ ಇರಲಿಲ್ಲ ಆಗೆ ಆಟ ಆಡುವಾಗೇನಾದರು ನಮ್ಮ ಪಿ.ಟಿ ಮಾಸ್ಟರ್ ಕೈಯಲ್ಲಿ ಸಿಕ್ಕಿಹಾಕಿಕೋಂಡು ಬಿಟ್ಟರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ .

ಈಗೆ ಒಂದು ದಿವಸ ನಮ್ಮ ಗುಂಪಿನವರೆಲ್ಲಾ ಸೇರಿ ಆಡ್ತಾ ಇದ್ವಿ ಹೆಚ್ಚು ಕಡಿಮೆ ಒಂದು ಹತ್ತು ಹುಡುಗರು ಇದ್ವಿ.ಆ ದಿವಸ ನಮ್ಮ ಶಾಲಾ ಪಿ.ಟಿ ಮಾಸ್ಟರ್ ಏಕಾಏಕಿ ನಮ್ಮ ಶಾಲಾ ಮೈದಾನದಲ್ಲಿ ಪ್ರತ್ಯಕ್ಷನಾಗೆ ಬಿಟ್ಟ. ದರಿದ್ರದ್ದು ಆ ಸಮಯಕ್ಕೆ ಸರಿಯಾಗಿ ನನ್ನ ಸ್ನೇಹಿತ ಹೊಡೆದಂತಹ ಚೆಂಡು ಅವನ ಪಾದದ ಬಳಿ ಹೋಗಿ ಬಿತ್ತು.ಆಗ ನಮ್ಮ ಪಿ.ಟಿ ಮಾಸ್ತರ್ ಚೆಂಡನ್ನು ಕೈಗೆತ್ತಿಕೊಂಡು ಏರು ದ್ವನಿಯಲ್ಲಿ ಯಾವನಲೆ ಅವ ಆಟ ಆಡಬೇಡ್ರಲೇ ಅಂದ್ರು ಆಟ ಆಡ್ತಿರವ ಬನ್ನ್ರೊ ಇಲ್ಲಿ ಅಂತ ಕರೆದರು.ಎಲ್ಲಾರಿಗು ಒಂದು ಒಂದು ಚಡಿ ಏಟು ಕೊಟ್ಟು ಹೆಡ್ ಮಾಸ್ತರ್ ಅತ್ತಿರ ನಡಿರಲೆ ಅಂತ ಕರೆದುಕೊಂಡು ಹೋದರು.ಆ ಸಮಯಕ್ಕೆ ಶಾಲೆ ಘಂಟೆ ಸಹ ಬಾರಿಸಿತು.ಆಗ ನಮ್ಮ ಹೆಡ್ ಮಾಸ್ತರ್ ಪ್ರಾರ್ಥನೆ ಮುಗಿಸಿ ಬಂದು ವಿಚಾರ ಮಾಡ್ತಿನಿ ಅಂದ್ರು. ನಾನು ಮತ್ತು ನನ್ನ ಸ್ನೇಹಿತರೆಲ್ಲಾ ಒಬ್ಬರಿಂದೆ ಒಬ್ಬರು ಸಾಲಾಗಿ ನಿಂತುಕೊಂಡಿದ್ವಿ.ಆ ಸಾಲಿನಲ್ಲಿ ಮೊದಲಿಗೆ ನಿಂತಿದ್ದ ನಾನು ಮತ್ತು ನನ್ನ ಹಿಂದೆ ನಿಂತಿದ್ದ ನನ್ನ ಸ್ನೇಹಿತನಿಗೆ ಇಬ್ಬರಿಗೊ ಒಂದು ಮನೆ ಹಾಳು ಯೋಚನೆ ಬಂತು. ಲೇ ನಾವು ನೋಡಿದರೆ ಸಾಲಿನಲ್ಲಿ ಮೊದಲೆ ನಿಂತಿವಿ ಹೆಡ್ ಮಾಸ್ಟರ್ ಪ್ರಾರ್ಥನೆ ಮುಗಿಸಿದ ಮೇಲೆ ಈ ಕಡೆಯಿಂದನೆ ಬರೋದು ನಾವು ನೋಡಿದರೆ ಮುಂದೆ ನಿಂತಿವಿ ಮೊದಲು ಕೈಗೆ ಸಿಗದೆ ನಾವು ಹಿಟ್ಟಾಡಿಸಿಕೊಂಡು ಹೊಡೆದುಬಿಡ್ತಾರೆ ಬಾ ಸೀದಾ ಇವರೆಲ್ಲಾರಿಗಿಂತ ಹಿಂದೆ ಹೋಗಿ ನಿಂತುಬಿಡೊಣ.ಯಾಕೆಂದರೆ ಇವರೆಲ್ಲಾರಿಗು ವಿಚಾರಿಸಿಕೊಂಡು ಬರುವತ್ತಿಗೆ ಸುಸ್ತು ಆಗಿ ಬಿಟ್ಟಿರುತ್ತಾರೆ ಆವಾಗ ನಮಗೆ ಕಡಿಮೆ ಹೊಡೆತ ಬಿಳುತ್ತೆ ಬಾ ಹಿಂದೆ ಹೋಗಣ ಅಂತ ನಾನು ಮತ್ತು ನನ್ನ ಸ್ನೇಹಿತ ಹೋಗಿ ಕೊನೆಯಲ್ಲಿ ನಿಂತುಕೊಂಡೆವು.

ಪ್ರಾರ್ಥನೆ ಮುಗಿತು ಹೆಡ್ ಮಾಸ್ಟರ್ ಮತ್ತೆ ನಮ್ಮ ಪಿ.ಟಿ. ಮಾಸ್ಟರ್ ಬಂದ್ರು. ನಮ್ಮ ಗ್ರಹಚಾರ ಅವತ್ತು ಅವರ ಜೊತೆ ನಮ್ಮ ಕ್ಲಾಸ್ ಟೀಚರ್ ಸಹ ಬಂದ್ರು. ಬಂದವರೆ ಮುಂದೆ ನಿಂತಿದ್ದ ಹುಡುಗನ ತಲೆ ಕೊದಲು ಹಿಡಿದುಕೊಂಡು ಗೊಡೆಗೆ ಓಂದು ಡಿಚ್ಚಿ ಹೊಡೆಸಿಬಿಟ್ಟರು ಪಾಪ ಅಲ್ವ ಆ ಪಾಪ ನಾನೆ ಯಾಕೆಂದರೆ ನಾವು ಯಾವುದು ಮೊದಲು ಅಂತ ತಿಳಿದುಕೊಂಡಿದ್ದೆವೊ ಅದು ಆ ದಿನ ಕೊನೆ ಆಗಿತ್ತು.ನಾನಂತು ದೊಡ್ಡ ಬಲಿ ಕಾ ಬಕ್ರಾ ಆಗಿಬಿಟ್ಟಿದ್ದೆ. ನಮ್ಮ ಹೆಡ್ ಮಾಸ್ಟರ್ ಕೊಟ್ಟ ಮೊದಲ ಹೊಡೆತಕ್ಕೆ ಇನ್ನೆನು ನನ್ನ ಪ್ಯಾಂಟ್ ಒದ್ದೆ ಆಗಿಬಿಡ್ತಿತ್ತು Full ಕಂಟ್ರೊಲ್ ಮಾಡ್ಕೊಂಡೆ.

ಹೆಡ್ ಮಾಸ್ಟರ್: ಏನು ನಿನ್ನ ಹೆಸರು?
ನಾನು: ಬಸವರಾಜ್
ಹೆಡ್ ಮಾಸ್ಟರ್: ರಾಜ್........Last testನಲ್ಲಿ ಎಷ್ಟು Marks ಬಂದಿದೆ?
ನಾನು: ಸುಮ್ಮನೆ ತಲೆಬಗ್ಗಿಸಿ ನಿಂತುಕೊಂಡೆ. ಯಾಕೆಂದರೆ ನಮ್ಮ ಕ್ಲಾಸ್ ಟೀಚರ್ ಇದ್ದರಲ್ಲಾ ಅದಕ್ಕೆ ಇಲ್ಲಾ ಅಂದಿದ್ದರೆ ಏನಾದರು ಸುಳ್ಳು ಹೇಳಿಬಿಡುತ್ತಿದ್ದೆ.
ಕ್ಲಾಸ್ ಟೀಚರ್ : ಎರಡು Subject ನಲ್ಲಿ Fail ಆಗಿದ್ದಾನೆ ಸರ್.

ತಗಳಪ್ಪ ಹುರಿಯುವ ಬೆಂಕಿ ಮೇಲೆ ತುಪ್ಪ ಸುರಿದ ಆಗೆ ಹಾಯ್ತು ಹೆಡ್ ಮಾಸ್ಟರ್ ಗೆ ಕೋಪ ಇನ್ನು ಜಾಸ್ತಿ ಆಯ್ತು.

ಹೆಡ್ ಮಾಸ್ಟರ್ : ಶಾಲೆಗೆ ಬೇಗ ಬಂದಿರ್ತಿರಾ ಮೇಷ್ಟ್ರುಗಳತ್ತಿರಾ ಗೋತ್ತಾಗದೆ ಇಲ್ಲದ್ದನ್ನ ಕೇಳಿ ತಿಳಿದುಕೊಳ್ಳೊದು ಬಿಟ್ಟು ಆಟ ಆಡ್ತಿರಾ ಆಟ ಅಂತ ಎರಡು ಬಾರಿಸಿದರು ಬಾಸುಂಡೆ ಬರುವ ಹಾಗೆ ಕೆನ್ನೆ ಮೇಲೆ.

ಆಗ ಇನ್ನೆನು ಬಂದೆ ಬಿಟ್ಟಿತು ಅಂದುಕೊಂಡೆ ಮತ್ತೆ full control ಮಾಡಿಕೊಂಡೆ.ಅಲ್ಲಿಗೆ ನನ್ನ ಸರದಿ ಮುಗಿತು next ನನ್ನ ಪಕ್ಕದವನದು ಅದೆ ಮನೆ ಹಾಳು IDEAದಲ್ಲಿ ಭಾಗಿಯಾಗಿದ್ದನಲ್ಲ ಅವನದು ಅವನಂತು ನನಗೆ ಹೋಡೆಯುವಾಗನೆ ಗಢ ಗಢ ನಡುಗುತ್ತಿದ್ದ. ಅಷ್ಟರಲ್ಲಿ ಜವಾನ ಬಂದು ಸರ್ DDPI office ನಿಂದ ಕರೆ ಬಂದಿದೆ ಅಂದ.

ಹೆಡ್ ಮಾಸ್ಟರ್: ಇವರದೆಲ್ಲಾ ಹೆಸರು ಬರಿಸಿಕೊಂಡು ಸಹಿ ಮಾಡಿಸಿಕೋ ಅಂತ ನಮ್ಮ ಪಿ.ಟಿ. ಮಾಸ್ಟರ್ ಗೆ ಹೇಳಿ ಇನ್ನೊಂದು ಸಲ ಎಲ್ಲಾದರು Free hour ನಲ್ಲಿ ಆಟ ಆಡೊದನ್ನ ನೋಡಿದರೆ ನಿಮ್ಮನ್ನ examಗೆ ಕುರಿಸೋದಿಲ್ಲ ನೋಡಿ ಅಂತ ಎಚ್ಚರಿಕೆ ಕೊಟ್ಟು ಹೋದರು.

ನಮ್ಮ ಹತ್ತಿರ ಸಹಿ ತಗೋಂಡು ನಮ್ಮನ್ನ class roomಗೆ ಹೊಗಿ ಅಂದ್ರು. ನಮ್ಮ ಸ್ನೇಹಿತರೆಲ್ಲಾ ನಿಟ್ಟುಸಿರು ಬಿಟ್ಟು ಬಚಾವಾದೇವು ಅಂದು class room ಕಡೆ ಹೊರಟರು. ಸುಮ್ಮನೆ ಮೊದಲು ಎಲ್ಲಿ ನಿಂತಿದ್ದೆನೊ ಅಲ್ಲೆ ನಿಂತಿದ್ದರೆ ಬಾಚವ್ ಆಗ್ತಾ ಇದ್ದೆ ಅಂತ ಮನಸ್ಸಿನಲ್ಲೆ ಅಂದುಕೊಂಡು ನಾನು ಬೇರೆ ದಿಕ್ಕಿನೆಡೆ ಹೊರಟೆ. ನಮ್ಮ ಪಿ.ಟಿ. ಮಾಸ್ಟರ್ ಮತ್ತೆ ಎಲ್ಲಿಗೆ ಹೊರಟೆ ನಿನಗೆ ಸ್ಪೆಷಲ್ ಹಾಗಿ ಹೇಳಬೇಕಾ class roomಗೆ ಹೋಗು ಅಂತ ಅಂದ್ರು.ತಡಿರಿ ಸಾರ್ Toiletಗೆ ಹೋಗಿ ಬರ್ತಿನಿ ಅಂತ ಅಂದು Toiletಗೆ ಹೋಗಿ class roomಗೆ ಹೋದೆ.

ಆವತ್ತಿನಿಂದ ಯಾವತ್ತು SSLC ಮುಗಿಯುವ ತನಕ Free hours ನಲ್ಲಿ ಶಾಲೆಯಲ್ಲಿ ಆಟ ಅನ್ನೊ ಸುದ್ದಿನೆ ತಗೆಯಲಿಲ್ಲ ಯಾಕೆ ಅಂದರೆ ಆಟ ಆಡೋಕೆ ಅಂತಾನೆ ಅಲ್ಲೆ ಹತ್ತಿರದಲ್ಲೆ ಇದ್ದಂತಹ ಓಂದು ಮೈದಾನವನ್ನ FIX ಮಾಡ್ಕೊಂಡೆವು.

Thursday, January 28, 2010

ಒಲವಿನ ಓಲೆ

Hello, ಒಂದು ನಿಮಿಷ ಕೇಳು ನಾನು ಎಷ್ಟೊ ತಿಂಗಳುಗಳಿಂದ ನನ್ನ ಪ್ರೀತಿನಾ ನಿನ್ನ ಮುಂದೆ ವ್ಯಕ್ತ ಪಡಿಸುವುದಕ್ಕೆ ಆಗದೆ ನಾನು ನನ್ನ ಆಸೆಗಳನ್ನ,ಭಾವನೆಗಳನ್ನ,ಕಲ್ಪನೆಗಳನ್ನ ಮತ್ತು ಕನಸುಗಳನ್ನೆಲ್ಲಾ ನನ್ನ ಎದೆಯಲ್ಲೆ ಮುಚ್ಚಿಟ್ಟುಕೊಂಡಿದ್ದೆ ಇವತ್ತು ಅ ನನ್ನ ಹುಚ್ಚು ಕಲ್ಪನೆಗಳೆಂಬ ತುಂಬು ಗರ್ಭಿಣಿಗೆ ಹೆರಿಗೆ ಸಮಯ ಆ ನೋವನ್ನ ತಡಿಲಾರದೆ ಆ ನನ್ನ ಆಸೆ ಮತ್ತು ಕಲ್ಪನೆಗಳನ್ನೆಲ್ಲಾ ನನ್ನ ಹೃದಯಾನೆ ಒಂದು ಖಾಲಿ ಹಾಳೆಯಾನ್ನಾಗಿ ಮಾಡಿಕೊಂಡು ನಿನಗೆ ಒಂದು ಚಿಕ್ಕ ಓಲೆಯನ್ನಾ ಬರೆದು ನಿನ್ನ ಮುಂದಿಡ್ತಾ ಇದ್ದಿನೀ.

ನಾವಿಬ್ಬರು ಸುಮಾರು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಯ ಇದ್ದಿವಿ ಒಟ್ಟಿಗೆ ಇಂಜಿನಿಯರಿಂಗ್ ಮಾಡಿದ್ವಿ ಮತ್ತೆ ಒಂದೆ ಕಂಪನಿಯಲ್ಲೆ ಕೆಲಸನು ಮಾಡ್ತಾ ಇದ್ವಿ ಆದರೆ ನಮ್ಮಿಬ್ಬರ ನಡುವೆ ಅಷ್ಟೊಂದು ಮಾತು ಇರಲಿಲ್ಲ ಖಾಲಿ ಒಂದು Cute smile ಅಷ್ಟೆ. ಮೊದಲು ಮೊದಲು ನಿನ್ನನ್ನ ನೊಡಿದರೆ ನನ್ನಲ್ಲಿ ಯಾವದೆ ತರಹದ ಭಾವನೆಗಳಾಗಲಿ ಕಲ್ಪನೆಗಳಾಗಲಿ ಮೂಡುತ್ತ ಇರಲಿಲ್ಲ ಆದರೆ ಇತ್ತೀಚಿಗೆ ಯಾಕೋ ನಿನ್ನನ್ನ ನೋಡಿದಾಗ "ಏನೋ ಓಂತಾರ....." ನನ್ನ ಈ ಪುಟ್ಟ ಹೃದಯದಲ್ಲಿ ಭಾವನೆಗಳ ಸುನಾಮಿನೆ ಬಂದ ಹಾಗೆ ಆಗುತ್ತೆ. ಹುಂ ಏನು ಹೇಳಬೇಕೊ ಒಂದು ತಿಳಿತಾ ಇಲ್ಲ ಕಣೇ something like ನನ್ನ ಮನಸ್ಸಿನಲ್ಲಿ kuch kuch hota hai.

ನಾವು ಕೆಲಸಕ್ಕೆ ಹೊಗುವ ಕಂಪನಿಗೆ ಮೆಜೆಸ್ಟಿಕ್ ನಿಂದ ಬಸ್ ಅನ್ನು ಪಿಕಪ್ ಮಾಡಬೇಕಿತ್ತು. ನಮ್ಮಿಬ್ಬರದು ಒಂದೆ ಶಿಫ್ಟ್ ಆಗಿದ್ದರಿಂದ ದಿನಾನು ಒಂದೆ ಸಮಯಕ್ಕೆ ಬಂದು ಬಸ್ ಅನ್ನು ಕಾಯ್ತ ಇದ್ವಿ.ಬಸ್ ಅನ್ನು ಪಿಕಪ್ ಮಾಡುವುದಕ್ಕೆ ಅಂತ ಬಸ್ ಸ್ಟ್ಯಾಂಡ್ ಗೆ ಬಂದಾಗ ನನ್ನ ಕಣ್ಣುಗಳು ನನಗೆ ತಿಳಿಸದೇನೆ ಮೊದಲು ನಿನ್ನನ್ನ ಹುಡುಕುತ್ತಿದ್ದವು ಆ ಸಮಯದಲ್ಲೆನಾದರು ನೀನು ನನ್ನ ಕಣ್ಣಿಗೆ ತಕ್ಷಣ ಕಾಣಾದೆ ಹೋದರೆ ನನ್ನ ಮನಸ್ಸು ಛೆ ಇವತ್ತು ನಾನು ಅವಳನ್ನ ಮಿಸ್ ಮಾಡ್ಕೊಂಡ್ ಬಿಟ್ಟೆ ಅವಳು ಆಫಿಸ್ ಗೆ ಬರೋದಿಲ್ಲವೇನೊ ಅಂತ ತಳಮಳಗೊಳ್ಳುತಿತ್ತು. ನೀನು ಕಂಡೆ ಅಂತ ಅಂದರೆ ನನ್ನ ಮನಸ್ಸು ಸಂತೋಷದಿಂದ ಕುಣಿಯೋಕೆ ಶುರು ಮಾಡ್ತಾ ಇತ್ತು. ಏಷ್ಟೊ ಬಾರಿ ಆ ಸಮಯದಲ್ಲಿ ನಾನು ನಿನ್ನ ಹತ್ತಿರ ಬಂದು ಮಾತಾನಾಡಬೇಕು ಅಂತ ಹಂಬಲಿಸುತ್ತಿದ್ದೆ ಆದರೆ ನೀನು ಮಾತ್ರ ನಿನ್ನ ಗೆಳತಿಯರೋಂದಿಗೆ ಮಾತಾನಡುವುದರಲ್ಲಿ ತಲ್ಲೀನಾಳಾಗಿ ಬಿಡುತ್ತಿದ್ದೆ.

ಆಫಿಸ್ ನಲ್ಲು ಅಷ್ಟೆ ನಾವು Friends ಏಲ್ಲಾ ಸೇರಿ ಒಟ್ಟಿಗೆ ಟೀ ಕುಡಿಯೋಕೆ ಅಂತ ಹೊಗ್ತಾ ಇದ್ವಿ. ಆ ಸಮಯದಲ್ಲು ಅಷ್ಟೆ ನೀನು ನೀನ್ನ ಗೆಳೆತಿಯರೊಂದಿಗೆ ಅಷ್ಟೆ ಮಾತಾನಾಡ್ತಾ ಇದ್ದೆ. ಹಾಗೆ ನಿನ್ನ ಗೆಳೆತಿಯರೊಂದಿಗೆ ಮಾತಾನಾಡ್ತ ಮಾತಾನಾಡ್ತ ನನ್ನನ್ನು ಮಾತಾನಾಡಿಸುತ್ತಿಯೆನೋ ಅಂತ ಕಾಯ್ತ ಇದ್ದೆ ಆದರೆ ನೀನು ಮಾತ್ರ ಹಾಗೆ ಸುಮ್ಮನೆ ಇದ್ದು ಬಿಡ್ತ ಇದ್ದೆ. ಯಾಕೆಂದರೆ ನೀನು ಯಾವ ಹುಡುಗರ ಬಳಿಯು ಹೆಚ್ಚು ಮಾತಾನಾಡ್ತಾ ಇರಲಿಲ್ಲ ಅದಕ್ಕೆ ಅಲ್ವೆನೆ.ಹಾಗೆ ನೀನು ಸುಮ್ಮನೆ ಆಗಿದ್ದಾಗ ನನ್ನ ಮನಸ್ಸು ಮಾತಾನಾಡಿಸೋ ಅವಳನ್ನ ಅಂತ ಹೇಳ್ತಾಇತ್ತು. ಆದರೆ ನನಗೆ ಬೇರೆ ಹುಡುಗಿಯರನ್ನ ಮಾತಾನಾಡಿಸುವಗಾ ಭಯ ಇಲ್ಲದೆ ನಿಸ್ಸಂಕೋಚದಿಂದಮಾತನಾಡ್ತ ಇದ್ದೆ ಆದರೆ ನಿನ್ನ ಹತ್ತಿರ ಮಾತನಾಡೋಕೆ ಏನೋ ಮುಜುಗರ ಆಗ್ತಾ ಇತ್ತು ಯಾಕೆ ಅಂತ ಗೊತ್ತಿಲ್ಲ.

ನಿಜ ಹೇಳಲಾ ನೀನು ಎದುರುಗಡೆ ಸಿಕ್ಕಾಗ ಆ ಒಂದು cute smile ಕೊಡ್ತಿಯಲ್ಲಾ ಆ smileಗೆ ನಾನು ಕ್ಲಿನ್ BOLD ಆಗಿಬಿಟ್ಟಿದ್ದಿನಿ ಕಣೇ.

ನಾನು ಒಂಟಿಯಾಗಿದ್ದಾಗಂತು ನೀನು ನನಗೆ ಎಷ್ಟು ಕಾಡ್ತಿಯಾ ಗೊತ್ತ ಅದರಿಂದ ನಾನು ತಪ್ಪಿಸಿಕೊಳ್ಳೋಕೆ ಅಂತ ಒಂದು ಕ್ಷಣ ನಾನು ಕಣ್ಣು ಮುಚ್ಹಿದರೆ ನನ್ನ ಮನಸ್ಸಿನಲ್ಲೆ ನಿನ್ನ ಪ್ರತಿಬಿಂಬ ಮೂಡುತ್ತೆ ಕಣ್ಣು ಬಿಟ್ಟೆ ಅಂದರೆ ಕಣ್ಣ ಮುಂದೆ ಬಂದು ನಿಂತ ಹಾಗೆ ಆಗುತ್ತೆ ಕಣೆ.Total ಆಗಿ ಹೇಳಬೆಕು ಅಂತ ಅಂದರೆ "ಕನಸಲು ನೀನೆ ಮನಸಲು ನೀನೆ"

ಇಬ್ಬರಿಗೂ ಒಬ್ಬರದೊಬ್ಬರ ಮೊಬ್ಯೆಲ್ ನಂಬರ್ ಗೊತ್ತಿದ್ದರು ಇಷ್ಟು ವರ್ಷದಲ್ಲಿ ಒಂದು ಸಾರಿನು ಅದರ ಮುಖಾಂತರ ಸಂಭಾಷಣೆ ನಡೆದಿದ್ದಿಲ್ಲ. ನನಗೂ ಸಹ ಭಯ ಇತ್ತು. ಹೇಗಪ್ಪ ಇವಳ ಹತ್ತಿರ ಮೊಬ್ಯೆಲ್ ಮೂಲಕ ಮಾತಾನಾಡಿಸುದು ಮತ್ತೆ ಹೇಗಪ್ಪ ಇವಳಿಗೆ SMS ಕಳಿಸುವುದು ಅಂತ ಯಾಕೆಂದರೆ ನೀನು ಎದುರುಗಡೆ ಸಿಕ್ಕಾಗೆ ಹೆಚ್ಚು ಮಾತಾನಾಡುತ್ತಾ ಇರಲಿಲ್ಲವಲ್ಲ ಅದಕ್ಕೆ. ಅದರೆ ಒಂದು ದಿನ ಬೆಳಗ್ಗೆ ನಾನು ಮೆಜೆಸ್ಟಿಕ್ ಗೆ ನವರಂಗ್ ನಿಂದ ಬರೋದು ಲೇಟ್ ಆಯ್ತು ಆಗ ನೀನು ಎಲ್ಲಿದ್ದಿಯ ಬೇಗ ಬಾ ಬಸ್ ಹೋರಟು ನಿಂತಿದೆ ಅಂತ SMS ಮಾಡಿದ್ದೆ ಗೋತ್ತಾ ಆ SMS ನ ಈವಾಗಲು ನಾನು ನನ್ನ ಮೊಬ್ಯೆಲ್ ನ draft ನಲ್ಲಿ save ಮಾಡಿ ಇಟ್ಟುಕೊಂಡಿದ್ದಿನಿ ಗೋತ್ತಾ. ಆ ದಿವಸ ನಾನು ಕಂಪನಿಯಲ್ಲಿ ಸರಿಯಾಗಿ ಕೆಲಸ ಮಾಡ್ಲಿಲ್ಲ ಮತ್ತೆ ರಾತ್ರಿ ಸರಿಯಾಗಿ ನಿದ್ದೇನೆ ಬರಲಿಲ್ಲ ಗೊತ್ತಾ. ನೀನು ಕಳಿಸಿರೊ SMS ನಾ ಸುಮ್ನೆ ಮೇಲಿನಿಂದ ಕೆಳಗೆ ಕೆಳಗಿನಿಂದ ಮೇಲಿ ಪುನಃ ಪುನಃ ಹೊದುತ್ತಾ ಕುಳಿತಿದ್ದೆ ಕಣೆ. ನೀನು ಕಳಿಸಿರೋ ಆ SMS ನಲ್ಲಿ ನನ್ನ ಮೇಲೆ ನಿನಗೆ ಕರುಣೆ ಇತ್ತು ಅನುಕಂಪ ಇತ್ತು ಅಲ್ವೇನೆ, ಅದೆನಾದರು ಸ್ವಲ್ಪ ಜಾಸ್ತಿ ಆದರೆ ಹುಟ್ಟೊದೆ ಆ ಏರಡು ಅಕ್ಷರದ ಪ್ರೀತಿ ಕಣೆ ಅದು ಈಗ ನಿನ್ನ ಮೇಲೆ ನನಗೆ ಹುಟ್ಟಿದೆ ಕಣೆ. ಒಂದು ಮಾತು ಹೇಳ್ತಿನಿ ಕೇಳು ಬೇರೆಯವರಿಗೆ ಈ ಪ್ರಪಂಚದಲ್ಲಿ ನೀನು ಒಬ್ಬಳು ಹುಡುಗಿ ಆದರೆ ನನಗೆ ಈ ಪ್ರಪಂಚನೆ ನೀನು ಕಣೆ ಗೊತ್ತಾ.ನೋಡು ಆ ಬ್ರಹ್ಮ ನನ್ನ ಹಣೆಯಲ್ಲಿ ನಿನ್ನ ಹೆಸರನ್ನ ಬರೆದಿರುವನೊ ಇಲ್ಲವೊ ಗೊತ್ತಿಲ್ಲ ಆದರೆ ನಾನು ಮಾತ್ರ ನನ್ನ ಎದೆಯಲ್ಲಿ ನಿನ್ನ ಹೆಸರನ್ನ ಅಳಿಸಿ ಹೋಗದೆ ಇರುವ ಹಾಗೆ ಹಚ್ಚೆ ಹಾಕಿಬಿಟ್ಟಿದ್ದಿನಿ ಕಣೆ.

ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಯಾವ ಭಾವನೆ ಇದೆಯೋ ನನಗೆ ಗೋತ್ತಿಲ್ಲ ಕಣೇ. ಎಲ್ಲಾ ಹುಡುಗಿಯರಿಗು ನನ್ನ ಕೈ ಹಿಡಿಯುವವನು ಇ ತರಹ ಇರಬೇಕು ಆ ತರಹ ಇರಬೇಕು ಅಂತ ಕಲ್ಪನೆಗಳು ಇರುತ್ತವೆ. ಆ ನಿನ್ನ ಕಲ್ಪನೆಗಳಿಗೆ ನಾನು ಸರಿಹೊಗ್ತಿನೋ ಇಲ್ವೊ ಗೊತ್ತಿಲ್ಲ ಆದರೂ ನನ್ನ ಮನಸ್ಸು ಹೇಳ್ತಾ ಇದೆ ನಿನಗೊ ನನ್ನ ಕಂಡರೆ ಇಷ್ಟ ಅಂತ.

ಇಷ್ಟೊಂದು ಎಲ್ಲ ಹೇಳದೆ ನೇರವಾಗಿ ನೀನ್ನ ಮುಂದೆ ಬಂದು ನಿಂತು I LOVE YOU ಅಂತ ಹೇಳಬಹುದಿತ್ತು ಆದರೆ ಯಾಕೋ ಏನೋ ನೇರವಾಗಿ ನಿನ್ನ ಮುಂದೆ ಬಂದು ನಿಂತು ಆ ಮೂರು ಪದಗಳನ್ನ ಹೇಳುವುದಕ್ಕೆ ತುಂಬಾ ಭಯ ಅನಿಸುತ್ತಿತ್ತು ಅದಕ್ಕೆ ಈ ಪ್ರಯತ್ನ ಮಾಡ್ತಾಇದ್ದಿನಿ ಕಣೆ. ನಿನಗೆನಾದರು ನಾನು ಇಷ್ಟ ಆದರೆ ಹೇಳು

-:I AM WAITING :-

ಆದರೆ ಒಂದು ವಿಷಯ ನಿನಗೇನಾದರು ನನ್ನ ಮೇಲೆ ಮನಸ್ಸಿಲ್ಲಾ ಅಂದ್ರೆ ನೇರವಾಗಿ ಹೇಳಿ ಬಿಡು ನನಗೇನು ಬೇಜಾರಿಲ್ಲಾ ಕಣೇ ಆದರೆ ನನ್ನ ನಿನ್ನ ಸ್ನೇಹ ಮಾತ್ರ ಕೊನೆ ತನಕ ಹಾಗೆ ಮುಂದುವರಿಯಬೇಕು ಅಂತ ಬಯಸ್ತೀನಿ ಕಣೇ ಮತ್ತೆ ಯಾವತ್ತು ನಾನು ನಿನ್ನ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಕಾಡೋದು ಇಲ್ಲಾ, ಯಾಕೆ ಅಂದ್ರೆ ಪೋಲಿ ನಾನಲ್ಲ. ನಿನ್ನ ಇಷ್ಟಾನೆ ನನ್ನ ಇಷ್ಟ ಅದಕ್ಕೆ.

Wednesday, January 20, 2010

ಹೇಳಲಾಗದೆ ಹೋದೆ

ನಿನ್ನ ಬಳಿ ನನ್ನ ಮನಸ್ಸಿನಲ್ಲಿರುವ ನಿನ್ನ ಮೇಲಿನ ಪ್ರಿತಿಯನ್ನ ಹೇಳಲೆ ಅಥವಾ ಬೇಡವೊ
ಒಂದು ಅರಿಯಾದಾದೆನಲ್ಲೆ ನನ್ನ ನಲ್ಲೆ
ಹೇಳಿದರೆ ಎಲ್ಲಿ ನನ್ನವರೆಲ್ಲಾ ನನ್ನಿಂದ ದೊರವಾಗುವರೆಂಬ ದುಗುಢ ನನ್ನಲ್ಲೆ
ಹೇಳದೆ ಹೋದರೆ ನಲ್ಲೆ ನಿ ನನಗೆ ಸಿಗದೆ ದೊರಾವಾಗುವೆಯಲ್ಲೆ
ಕೊನೆಗು ನಾ ಹೇಳದೆ ಹೋದರೆ ನಲ್ಲೆ
ನನಗೇನು ಬೇಸರವಿಲ್ಲೆ
ನೀನು ಬಿಟ್ಟು ಹೋದೆಯಲ್ಲ ನಲ್ಲೆ
ಆ ಸುಮಧುರ ಕ್ಷಣಗಳ ನೆನಪುಗಳ ಬುತ್ತಿಯನ್ನು ನನ್ನ ಮನಸ್ಸಿನಲ್ಲೆ
ಅಷ್ಟು ಸಾಕೆ ನಲ್ಲೆ ನನಗೆ ಈ ಜನುಮಕೆ
ಅದರಲ್ಲೆ ನಾ ತೃಪ್ತಿ ಪಡೆವೆನು ನಲ್ಲೆ ಓ ನನ್ನ ನಲ್ಲೆ

Thursday, January 14, 2010

ಸಂಕ್ರಾಂತಿ ಮಕರಸಂಕ್ರಾಂತಿ

ನಾವು ಉತ್ಸವ ಪ್ರಿಯರು. ನಾವು ಆಚರಿಸುವ ಹಬ್ಬ, ಹರಿದನಗಳನು್ನ ತೆರು-ಜಾತ್ರೆಗಳನು್ನ ಪ್ರಪಂಚದ ಯಾವ ರಾಷ್ಟ್ರಿಯ ಜನರು ಆಚರಿಸುವುದಿಲ್ಲ. ಯಾಂತ್ರಿಕ ಬದುಕಿನ ನಡುವೆ ಹಬ್ಬಗಳು ಬದುಕನ್ನು ಹಸನಾಗಿಸುವಲ್ಲಿ,ಕುಟುಂಬದಲ್ಲಿ ನೆಮ್ಮದಿ,ಲವಲವಿಕೆ, ಸಂತೋಷವನ್ನು ಉಂಟುಮಾಡಲು ನೆರವಾಗುತ್ತವೆ. ಅಂತ ಕೆಲವು ಹಬ್ಬಗಲ್ಲಿ ನಮ್ಮ ಮಕರ ಸಂಕ್ರಾಂತಿಯು ಒಂದು.

ಜಗತ್ತಿಗೆ ಬೆಳಕನ್ನು ಕೊಡುವ ಸೊರ್ಯ ತನ್ನ ಪಥ ಬದಲಾವಣೆ ಮಾಡುವ ಅಂದರೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಈ ದಿನವನ್ನು ಸಂಕ್ರಮಣ ಎಂದು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಮಕರ ಸಂಕ್ರಮಣ ಎಂದು ಕರೆಯುವರು.

ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬ ಅಂತನು ಕರೆಯುತ್ತೆವೆ.ಯುಗಾದಿ ಬೆವು-ಬೆಲ್ಲದ ಹಬ್ಬವಾದರೆ ಸಂಕ್ರಾಂತಿ ಎಳ್ಳು- ಬೆಲ್ಲದ ಹಬ್ಬ .ಸಂಕ್ರಾಂತಿಯ ದಿನದಂದು ಹೊಸದಾಗಿ ಬೆಳೆದ ಅಕ್ಕಿಯಲ್ಲಿ ಹುಗ್ಗಿಯನ್ನು ಮಾಡುತ್ತಾರೆ .ಆ ಹುಗ್ಗಿಯನ್ನು ನಾವು ಪೊಂಗಲ್ ಅಂತ ಕರೆಯುತ್ತೆವೆ. ಪೊಂಗಲ್ ಅಂದರೆ ಹುಕ್ಕುವುದು ಎಂದು ಅರ್ಥ.ಜೀವನದಲ್ಲಿ ಕಷ್ಟ ದೊರವಾಗಿ ಸುಖ ಉಕ್ಕಲಿ ಎಂಬುದು ಇದರ ಉದ್ದೇಶ.ಈ ಹಬ್ಬವನ್ನು ನಾವು ವಿಶೇಷಾವಾಗಿ ರೈತರ ಹಬ್ಬವಂತನೆ ಹೇಳಬಹುದು ಯಾಕೆ ಅಂದರೆ ರೈತರು ಸಂಕ್ರಾಂತಿಯ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ.ರೈತರು ತಮ್ಮ ತಮ್ಮ ದನ ಕರುಗಳಿಗೆ ಮೈ ತೊಳೆದು ವಿಶೆಷವಾಗಿ ಅಲಿಂಕರಿಸಿ ಕೆೋಡುಗಳಿಗೆ ಬಗೆ ಬಗೆಯ ಬಣ್ಣ ಹಚ್ಚುತ್ತಾರೆ. ಸಂಜೆ ಊರ ಬಾಗಿಲಲ್ಲಿ ಒಂದಷ್ಟು ಬೆಂಕಿ ಹಾಕಿ ತಮ್ಮ ತಮ್ಮ ದನ ಕರುಗಳನ್ನು ಒಡಿಸಿಕೊಂಡು ಬಂದು ಆ ಬೆಂಕಿಯಲ್ಲಿ ದಾಟಿಸಿ ಸಂಭ್ರಮ ಪಡುತ್ತಾರೆ. ಬಡವ ಬಲ್ಲಿದ, ಜಾತಿ ಭೇದಗಳೆಂಬ ಭೇದವಿಲ್ಲದೆ ಎಲ್ಲರು ಏಳ್ಳು ಬೆಲ್ಲ,ಕೊಬ್ಬರಿ,ಕಡಲೆಕಾಯಿಬೀಜ ಎಲ್ಲಾವನ್ನು ಸೇರಿಸಿ "ಎಳ್ಳು ಬೆಲ್ಲ ಸವಿಯೋಣ ಒಳ್ಳೆಯ ಮಾತನಾಡೋಣ" ಎನ್ನುತ್ತಾ ಎಳ್ಳು ಬೆಲ್ಲವನ್ನು ನೆರೆ ಹೊರೆಯವರೊಡನೆ ಬಂದುಗಳ ಜೊತೆಯಲ್ಲಿ ಹಂಚಿಕೊಂಡು ಸಂತಸ ಪಡುತ್ತಾರೆ.



ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿ ಹಿರುತ್ತಾ
ದ್ವೆಷ ಹಗೆಯನ್ನು ಮರೆಯುತ್ತಾ
ಸವಿ ಮಾತುಗಳನ್ನಾಡುತ್ತಾ
ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.