ಜಗತ್ತಿಗೆ ಬೆಳಕನ್ನು ಕೊಡುವ ಸೊರ್ಯ ತನ್ನ ಪಥ ಬದಲಾವಣೆ ಮಾಡುವ ಅಂದರೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಈ ದಿನವನ್ನು ಸಂಕ್ರಮಣ ಎಂದು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಮಕರ ಸಂಕ್ರಮಣ ಎಂದು ಕರೆಯುವರು.
ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬ ಅಂತನು ಕರೆಯುತ್ತೆವೆ.ಯುಗಾದಿ ಬೆವು-ಬೆಲ್ಲದ ಹಬ್ಬವಾದರೆ ಸಂಕ್ರಾಂತಿ ಎಳ್ಳು- ಬೆಲ್ಲದ ಹಬ್ಬ .ಸಂಕ್ರಾಂತಿಯ ದಿನದಂದು ಹೊಸದಾಗಿ ಬೆಳೆದ ಅಕ್ಕಿಯಲ್ಲಿ ಹುಗ್ಗಿಯನ್ನು ಮಾಡುತ್ತಾರೆ .ಆ ಹುಗ್ಗಿಯನ್ನು ನಾವು ಪೊಂಗಲ್ ಅಂತ ಕರೆಯುತ್ತೆವೆ. ಪೊಂಗಲ್ ಅಂದರೆ ಹುಕ್ಕುವುದು ಎಂದು ಅರ್ಥ.ಜೀವನದಲ್ಲಿ ಕಷ್ಟ ದೊರವಾಗಿ ಸುಖ ಉಕ್ಕಲಿ ಎಂಬುದು ಇದರ ಉದ್ದೇಶ.ಈ ಹಬ್ಬವನ್ನು ನಾವು ವಿಶೇಷಾವಾಗಿ ರೈತರ ಹಬ್ಬವಂತನೆ ಹೇಳಬಹುದು ಯಾಕೆ ಅಂದರೆ ರೈತರು ಸಂಕ್ರಾಂತಿಯ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ.ರೈತರು ತಮ್ಮ ತಮ್ಮ ದನ ಕರುಗಳಿಗೆ ಮೈ ತೊಳೆದು ವಿಶೆಷವಾಗಿ ಅಲಿಂಕರಿಸಿ ಕೆೋಡುಗಳಿಗೆ ಬಗೆ ಬಗೆಯ ಬಣ್ಣ ಹಚ್ಚುತ್ತಾರೆ. ಸಂಜೆ ಊರ ಬಾಗಿಲಲ್ಲಿ ಒಂದಷ್ಟು ಬೆಂಕಿ ಹಾಕಿ ತಮ್ಮ ತಮ್ಮ ದನ ಕರುಗಳನ್ನು ಒಡಿಸಿಕೊಂಡು ಬಂದು ಆ ಬೆಂಕಿಯಲ್ಲಿ ದಾಟಿಸಿ ಸಂಭ್ರಮ ಪಡುತ್ತಾರೆ. ಬಡವ ಬಲ್ಲಿದ, ಜಾತಿ ಭೇದಗಳೆಂಬ ಭೇದವಿಲ್ಲದೆ ಎಲ್ಲರು ಏಳ್ಳು ಬೆಲ್ಲ,ಕೊಬ್ಬರಿ,ಕಡಲೆಕಾಯಿಬೀಜ ಎಲ್ಲಾವನ್ನು ಸೇರಿಸಿ "ಎಳ್ಳು ಬೆಲ್ಲ ಸವಿಯೋಣ ಒಳ್ಳೆಯ ಮಾತನಾಡೋಣ" ಎನ್ನುತ್ತಾ ಎಳ್ಳು ಬೆಲ್ಲವನ್ನು ನೆರೆ ಹೊರೆಯವರೊಡನೆ ಬಂದುಗಳ ಜೊತೆಯಲ್ಲಿ ಹಂಚಿಕೊಂಡು ಸಂತಸ ಪಡುತ್ತಾರೆ.

ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿ ಹಿರುತ್ತಾ
ದ್ವೆಷ ಹಗೆಯನ್ನು ಮರೆಯುತ್ತಾ
ಸವಿ ಮಾತುಗಳನ್ನಾಡುತ್ತಾ
ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.
1 comment:
happy sankranti to u n ur family... Prasanna
Post a Comment