ದುಡಿದಿರಿ ನೀವು ಹಗಲಿರುಳು ನಮಗಾಗಿ
ಪಡೆದಿರಿ ಶ್ರಮ ನಮ್ಮ ಭವಿಷ್ಯಕ್ಕಾಗಿ
ನಮಗೇನು ಬೇಕೆಂದು ಹೇಳಲಿಲ್ಲ ನಾವು
ಕೇಳದೆಯೆ ಅದನೆಲ್ಲ ತಂದಿಟ್ಟಿರಿ ನೀವು
ಅದಕೇ ‘ತಂದೆ’ ನೀನು!
ನೀಡಿರುವೆ ನೀನು ಬಾಳನೆದುರಿಸುವ ಬಲವನ್ನು
ಗುರಿಯ ಸಾಧಿಸುವ ಛಲವನ್ನು
ವರುಷಗಳು ಬದಲಾದರು ಬದಲಾಗಲಿಲ್ಲ ನೀನು
ಹರುಷ ದುಃಖಗಳಲಿ ನಿನ್ನ ಮರೆಯುವೆನೆ ನಾನು
ನನ್ನಿಂದ ನೀ ದೂರದಲಿ ಇದ್ದರೂ
ಮನಸಿನಲಿ ಅನವರತ ತುಂಬಿರುವೆ ನೀನು
ನೀನಗೆನು ಬೇಕೆಂದು ಕೇಳುವಸ್ಟರಲ್ಲಿ ನಾವು
ನಮ್ಮಿಂದ ದೂರವಾಗಿ ಹೋಗಿಬಿಟ್ಟೆ ನೀನು
ಸುವಾಸನೆಯ ಮಳೆ
15 years ago
1 comment:
Hi
ಜೀವನದಲ್ಲಿ ನಾವು ಇಷ್ಟಪಟ್ಟ ಎಲ್ಲ ವಸ್ತುಗಳು ನಮ್ಮ ಹತ್ತಿರ ಇರುವುದಿಲ್ಲ. ಇದ್ದರೆ ನೋವು ಮತ್ತು ಸಂತೋಷಕ್ಕೆ ವ್ಯತ್ಯಾಸವೆ ಗೊತ್ತಾಗೊಲ್ಲ.
Pradeep
Post a Comment