ಮತ್ತೊಂದು ವರ್ಷವನ್ನು ಹಿಂದಿಕ್ಕಿ, ಇನ್ನೊಂದು ಹೊಸವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ ನಾವು. ಎಲ್ಲೆಡೆ ಶುಭಾಶಯಗಳ ಭರಾಟೆ, ಬಂಧು ಮಿತ್ರರು, ಆಪ್ತರು, ಆತ್ಮೀಯರು, ಪ್ರೀತಿ ಪಾತ್ರರಿಗೆ ಶುಭಹಾರೈಸುವ ತವಕ. ಮಧ್ಯೆ ನೆಟ್ವರ್ಕ್ ಜಾಮ್ ಕುಹಕ.
ಈ ಮಧ್ಯೆ ಇದು ನಮ್ಮ ಸಂಸ್ಕೃತಿ ಅಲ್ಲ, ಇದು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ, ನಮ್ಮ ಹೊಸವರ್ಷವೇನಿದ್ದರೂ ಯುಗಾದಿ ಎಂಬ ಕೆಲ ಅಸಮಾಧಾನ.
ಇರಲಿ, 2009ರ ಹೊಸ್ತಿಲಲ್ಲಿ ನಿಂತಿರುವ ನಾವು 'ಬದುಕಿ, ಬದುಕಲು ಬಿಡಿ' ತತ್ವವನ್ನು ಹಾರೈಸಿಕೊಳ್ಳೋಣ.
ದ್ವೇಷ, ವಂಚನೆ ಜಾಗದಲ್ಲಿ ಪ್ರೀತಿ, ಸಹಬಾಳ್ವೆ ಮೊಳೆಯಲಿ, ಶಾಂತಿ, ಅಭ್ಯುದಯ, ಸಂತೋಷ ತುಂಬಿರಲಿ ಎನ್ನುತ್ತಾ ಈ ವರ್ಷಕ್ಕೆ ಅಡಿ ಇಡೋಣ.

ನಡೆ ಮನವೆ ಹೊಸವರುಷಕೆ
ಸಿಹಿ ನೆನಪ
ಬುತ್ತಿ ಜೊತೆಗೆ,
ಎಡವಿ ಬಿದ್ದ ಕ್ಷಣವ ಕೊಡವಿ,
ಅಡೆತಡೆಗಳ ಎಲ್ಲ ಕೆಡವಿ,
ಕಟ್ಟುವ ಸವಿ ಸುಂದರ
ಕನಸುಗಳ,
ಕಾಯುವ ನನಸಾಗುವ ಆ ಕ್ಷಣಗಳ
ಹೊಸ ವರ್ಷ
ತರಲಿ ಹರುಷ
ಪ್ರತಿ ನಿಮಿಷ.
2 comments:
Happy New Year to you too!
Brad
Happy new year-2010 :)
Post a Comment